alex Certify 53ನೇ ವಯಸ್ಸಿನಲ್ಲಿ 30ರ ಯುವಕನಂತೆ ಫಿಟ್‌ ಆಗಿದ್ದಾರೆ ಕಾಂಗ್ರೆಸ್‌ ಯುವರಾಜ; ಇಲ್ಲಿದೆ ರಾಹುಲ್‌ ಗಾಂಧಿ ಅವರ ಫಿಟ್ನೆಸ್‌ ರಹಸ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

53ನೇ ವಯಸ್ಸಿನಲ್ಲಿ 30ರ ಯುವಕನಂತೆ ಫಿಟ್‌ ಆಗಿದ್ದಾರೆ ಕಾಂಗ್ರೆಸ್‌ ಯುವರಾಜ; ಇಲ್ಲಿದೆ ರಾಹುಲ್‌ ಗಾಂಧಿ ಅವರ ಫಿಟ್ನೆಸ್‌ ರಹಸ್ಯ….!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿರುವವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ. ಕಾಂಗ್ರೆಸ್‌ ಯುವರಾಜನಿಗೆ ಈಗ 53ರ ಹರೆಯ. ಆದರೆ ಅವರ ಫಿಟ್ನೆಸ್‌ 30ರ ಯುವಕನಂತಿದೆ. ಇತ್ತೀಚಿನ ದಿನಗಳಲ್ಲಿ 40 ದಾಟುತ್ತಿದ್ದಂತೆ ಅನೇಕರು ಬೆನ್ನು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆದರೆ ರಾಹುಲ್ ಗಾಂಧಿ ತಮ್ಮ 53ನೇ ವಯಸ್ಸಿನಲ್ಲಿ ಕಾಲ್ನಡಿಗೆಯಲ್ಲಿ ಭಾರತ ಪ್ರವಾಸ ಮಾಡಿದ್ದಾರೆ.

‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್‌ ರಹಸ್ಯವನ್ನು ಬಿಚ್ಚಿಟ್ಟಿದ್ದರು. ರಾಹುಲ್‌ ದೈಹಿಕವಾಗಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಚುನಾವಣಾ ತಯಾರಿಯಲ್ಲಿ ನಿರತರಾಗಿರುವಾಗಲೂ ಮಾರ್ಷಲ್ ಆರ್ಟ್ಸ್ ತರಗತಿಗಳನ್ನು ತಪ್ಪಿಸುವುದಿಲ್ಲ. ಇದಲ್ಲದೆ ಕಾರ್ಬೋಹೈಡ್ರೇಟ್ ಮುಕ್ತ ಆಹಾರವನ್ನು ಸೇವಿಸುತ್ತಾರೆ. ಹಾಗಂತ ಚಪಾತಿ ಮತ್ತು ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಿಲ್ಲ. ರಾಹುಲ್‌ ಗಾಂಧಿ ಈ ವಯಸ್ಸಿನಲ್ಲೂ ಇಷ್ಟೊಂದು ಫಿಟ್‌ ಆಗಿರಲು ಕಾರಣವಾಗಿರುವ ಅಂಶಗಳು ಯಾವುವು ಅನ್ನೋದನ್ನು ನೋಡೋಣ.

ದೈಹಿಕ ಚಟುವಟಿಕೆ

ನಿಯಮಿತ ದೈಹಿಕ ಚಟುವಟಿಕೆಯಿಂದ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯ ಪ್ರಯೋಜನಗಳು ಜೀವನದಲ್ಲಿ ದೀರ್ಘಕಾಲದವರೆಗೆ ಗೋಚರಿಸುತ್ತವೆ. ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ವಾಕಿಂಗ್, ರನ್ನಿಂಗ್, ಈಜು, ಜಿಮ್‌, ಡಾನ್ಸ್‌ ಇವೆಲ್ಲವೂ ದೈಹಿಕ ಚಟುವಟಿಕೆಗಳಲ್ಲಿ ಸೇರಿದೆ.

ಮಾರ್ಶಲ್‌ ಆರ್ಟ್ಸ್‌  

ಮಾರ್ಶಲ್‌ ಆರ್ಟ್ಸ್‌ ಕೂಡ ದೇಹವನ್ನು ಫಿಟ್‌ ಆಗಿಡಲು ಸಹಕಾರಿ. ಸ್ವರಕ್ಷಣೆ, ಸ್ಪರ್ಧೆ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಅಭ್ಯಾಸ ಮಾಡುವ ಪುರಾತನ ಸಂಪ್ರದಾಯ ಇದು. ಮಾರ್ಶಲ್‌ ಆರ್ಟ್ಸ್‌ ಪ್ರಾಕ್ಟೀಸ್‌ ಮಾಡುವುದರಿಂದ ಮನಸ್ಸಿನಲ್ಲಿ ಒತ್ತಡ ಇರುವುದಿಲ್ಲ. ಆತ್ಮವಿಶ್ವಾಸ, ಭಾವನಾತ್ಮಕ ಬೆಳವಣಿಗೆ ಮತ್ತು ದೇಹದ ಸಮತೋಲನವು ಹೆಚ್ಚಾಗುತ್ತದೆ.

ಕಡಿಮೆ ಕಾರ್ಬೋಹೈಡ್ರೇಟ್‌ ಸೇವನೆ

ಕಡಿಮೆ ಕಾರ್ಬ್ ಆಹಾರಗಳನ್ನು ತಿನ್ನುವುದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ರಚನೆಗೆ ಕಾರಣವಾಗುತ್ತವೆ. ಇದು ರೋಗಗಳಿಗೆ ಅನುಕೂಲಕರ ವಾತಾವರಣವಾಗಿದೆ. ಇದಲ್ಲದೆ ಕಾರ್ಬೋಹೈಡ್ರೇಟ್ ಕಡಿಮೆ ಇರುವ ಆಹಾರವು ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಕೂಡ ಇದು ಸಹಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...