
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎ.ಟಿ. ರಘು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
‘ಮಂಡ್ಯದ ಗಂಡು’ ಸೇರಿದಂತಹ 55 ಸಿನಿಮಾ ಗಳನ್ನು ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ. ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಎ.ಟಿ. ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ.
ನಿರ್ದೇಶಕ ಮತ್ತು ನಿರ್ಮಾಪಕ ಬಿ. ವಿಠಲಾಚಾರ್ಯ ಅವರ ಮಾರ್ಗದರ್ಶನದಲ್ಲಿ ರಘು ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ನಿರ್ದೇಶಕ ವೈ.ಆರ್. ಸ್ವಾಮಿ ಅವರ ಸಹಾಯಕರಾದರು. 1980 ರಲ್ಲಿ ಅವರು ಸ್ವತಂತ್ರವಾಗಿ ಅಂಬರೀಶ್, ಆರತಿ, ದ್ವಾರಕೀಶ್, ಸುಂದರ್ ಕೃಷ್ಣ ಅರಸ್, ಜೈ ಜಗದೀಶ್ ಮತ್ತು ಕೆ.ಎಸ್. ಅಶ್ವತ್ಥ್ ನಟಿಸಿದ ‘ನ್ಯಾಯ ನೀತಿ ಧರ್ಮ’ ಚಿತ್ರವನ್ನು ನಿರ್ದೇಶಿಸಿದರು. ಇದನ್ನು ವಿ.ಕೆ. ರಮೇಶ್ ನಿರ್ಮಿಸಿದ್ದಾರೆ.
ಅವರು 1984 ರಲ್ಲಿ ರಜನಿಕಾಂತ್ ಅಭಿನಯದ ‘ಮೇರಿ ಅದಾಲತ್’ ಎಂಬ ಹಿಂದಿ ಚಲನಚಿತ್ರವನ್ನು ಮಾಡಿದರು . ಮುಂದಿನ ವರ್ಷ ಅವರು ಮಲಯಾಳಂ ಚಿತ್ರ ಕಟ್ಟು ರಾಣಿ ಮಾಡಿದರು. 1990 ರಲ್ಲಿ ಅವರು ಅಜಯ್ ವಿಜಯ್ ಎಂಬ ಕನ್ನಡ ಚಲನಚಿತ್ರವನ್ನು ಮಾಡಿದರು. 1994 ರಲ್ಲಿ, ರಘು ಅವರು ಅಂಬರೀಶ್, ವಜ್ರಮುನಿ ಮತ್ತು ಬ್ಯಾಂಕ್ ಜನಾರ್ದನ್ ಅಭಿನಯದ ‘ಮಂಡ್ಯದ ಗಂಡು’ ನಿರ್ದೇಶಿಸಿದ್ದರು.
ಎ.ಟಿ. ರಘು ನಿರ್ದೇಶಿಸಿದ ಚಲನಚಿತ್ರಗಳು
ನ್ಯಾಯ ನೀತಿ ಧರ್ಮ (1980)
ಶಂಕರ್-ಸುಂದರ್
ಆಶಾ (1983)
ಅವಳ ನೆರಳು (1983)
ಧರ್ಮಯುದ್ದ
ಮೇರಿ ಅದಾಲತ್ (1984) (ಹಿಂದಿ)
ಗೂಂಡಾಗುರು
ಗುರು ಜಗದ್ಗುರು
ಕಾಡಿನ ರಾಜ
ದೇವರ ಮನೆ (1985)
ಕಟ್ಟು ರಾಣಿ (1985) (ಮಲಯಾಳಂ)
ಪ್ರೀತಿ (1986)
ಅಂತಿಮ ತೀರ್ಪು (1988)
ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್
ಆಪತ್ ಬಾಂಧವ
ಕೃಷ್ಣ ಮೆಚ್ಚಿದ ರಾಧೆ
ಪದ್ಮ ವ್ಯೂಹ
ನ್ಯಾಯಕ್ಕಗಿ ನಾನು
ಅಜಯ್ ವಿಜಯ್ (1990)
ಕೆಂಪು ಸೂರ್ಯ
ಪುಟ್ಟ ಹೆಂಡ್ತಿ (1992)
ಮೈಸೂರು ಜಾಣ
ಸೂರ್ಯೋದಯ
ಮಿಡಿದ ಹೃದಯಗಳು (1993)
ಜೈಲರ್ ಜಗನ್ನಾಥ್
ಮಂಡ್ಯದ ಗಂಡು (1994)
ಶ್ರ್ರಾವಣ ಸಂಜೆ
ಬೇಟೆಗಾರ