ನಾಸಿರಿಯಾ: ಇರಾಕ್ ದಕ್ಷಿಣ ನಗರವಾದ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದಾಗಿ ಸಂಭವಿಸಿದ ಭಾರಿ ಬೆಂಕಿ ದುರಂತದಲ್ಲಿ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ. 67 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮತ್ತು, ಪೊಲೀಸರು ತಿಳಿಸಿದ್ದಾರೆ.
ದಟ್ಟವಾದ ಹೊಗೆ, ಬೆಂಕಿ ಆಸ್ಪತ್ರೆ ಕಟ್ಟಡವನ್ನು ಆವರಿಸಿದ್ದರಿಂದ ತಕ್ಷಣಕ್ಕೆ ಕಾರ್ಯಾಚರಣೆ ಕೈಗೊಳ್ಳಲು ಅಡ್ಡಿಯಾಗಿದೆ.
ಪ್ರಧಾನಿ ಮುಸ್ತಫಾ ಅಲ್-ಕಧಿಮಿ ಹಿರಿಯ ಮಂತ್ರಿಗಳೊಂದಿಗೆ ತುರ್ತು ಸಭೆ ನಡೆಸಿ ನಾಸಿರಿಯಾ ಆರೋಗ್ಯ ಮತ್ತು ನಾಗರಿಕ ರಕ್ಷಣಾ ವ್ಯವಸ್ಥಾಪಕರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ.
ಯುದ್ಧ ಮತ್ತು ನಿರ್ಬಂಧಗಳಿಂದ ಇರಾಕ್ ನ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಕೊರೋನಾ ನಿಯಂತ್ರಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಇಂತಹದೊಂದು ಘೋರ ದುರಂತ ಸಂಭವಿಸಿದೆ.