alex Certify ಪ್ರಪಾತಕ್ಕೆ ಬಸ್ ಬಿದ್ದು ಕನಿಷ್ಠ 27 ಪ್ರಯಾಣಿಕರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಾತಕ್ಕೆ ಬಸ್ ಬಿದ್ದು ಕನಿಷ್ಠ 27 ಪ್ರಯಾಣಿಕರು ಸಾವು

ಲಿಮಾ: ದಕ್ಷಿಣ ಪೆರುವಿನ ಆಯಾಕುಚೋದಲ್ಲಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಬೆಳಗಿನಜಾವ 3 ಗಂಟೆಗೆ ಆಯಾಕುಚೋಪ್ರದೇಶದಿಂದ ಅರೆಕ್ವಿಪಾಗೆ ಅಂತರ ಪ್ರಾಂತೀಯ ಬಸ್ ತೆರಳುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ 250 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಲಿಮಾದ ಆಗ್ನೇಯ ಭಾಗಕ್ಕೆ 600 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ವಾರಿ ಪಲೋಮಿನೋ ಕಂಪನಿ ಗಣಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಅವರ ಕುಟುಂಬದವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗಾಯಾಳುಗಳನ್ನು ನಾಸ್ಕಾ ಆಸ್ಪತ್ರೆಗೆ ದಾಖಲಿಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...