ದುಬೈನ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ನೆರೆಹೊರೆಯಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ನಾಗರಿಕ ರಕ್ಷಣಾ ಪಡೆಯ ಪ್ರಕಾರ ಕಟ್ಟಡದಲ್ಲಿ ಕಟ್ಟಡ ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಅನುಸರಣೆಯ ಕೊರತೆಯಿಂದ ಬೆಂಕಿ ಸಂಭವಿಸಿದೆ. ಮೃತರು ಯಾವ ದೇಶಕ್ಕೆ ಸೇರಿದವರೆಂಬ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.