
ಸರಿ ಸುಮಾರು 145 ಸಿಖ್ರು ಹಾಗೂ 15 ಮಂದಿ ಹಿಂದೂಗಳು ಬ್ಲಾಸ್ಟ್ ಸಂಭವಿಸುವ ಮುನ್ನ ಹಮಿದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದರು. ತಾಲಿಬಾನಿಗಳ ಆಡಳಿತದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಫ್ಘನ್ನಿಂದ ಪಾರಾಗಲು ಎದುರು ನೋಡುತ್ತಿದ್ದರು.
ಆದರೆ ಬ್ಲಾಸ್ಟ್ ಸಂಭವಿಸುವ ಮುನ್ನವೇ ಅವರು ವಾಪಸ್ಸಾಗಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಜನನಿಬಿಡ ಗೇಟ್ಗಳಲ್ಲಿ ಆತ್ಮಹತ್ಯಾ ಬಾಂಬರ್ಗಳು ಕನಿಷ್ಟ 2 ಬಾರಿ ಬಾಂಬ್ ಬ್ಲಾಸ್ಟ್ ನಡೆಸಿದ್ದಾರೆ.
ತಾಲಿಬಾನಿಗಳ ಆಡಳಿತದಿಂದ ತಪ್ಪಿಸಿಕೊಂಡು ದೇಶದಿಂದ ಪಲಾಯನ ಮಾಡಬೇಕೆಂದು ನಿರ್ಧರಿಸಿದ ಹತಾಶ ನಾಗರಿಕರನ್ನು ಗುರಿಯಾಗಿಸಿ ಈ ಆತ್ಮಾಹುತಿ ದಾಳಿ ನಡೆಸಲಾಗಿತ್ತು.
ಮಾಹಿತಿಯ ಪ್ರಕಾರ ಈ ದಾಳಿಯಲ್ಲಿ ಕನಿಷ್ಟ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ದೆಹಲಿ ಸಿಖ್ ಗುರುದ್ವಾರ ಆಡಳಿತ ಕಮಿಟಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರಾ ಗುರುವಾರ ಈ ವಿಚಾರವಾಗಿ ಮಾತನಾಡಿದ್ದು ಈ ಹತ್ಯಾಕಾಂಡದಿಂದ ತಪ್ಪಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ ಎಂದಿದ್ದಾರೆ.
ಇಂದು ಕಾಬೂಲ್ನಲ್ಲಿ ಆತ್ಮಾಹುತಿ ದಾಳಿ ನಡೆದ ಜಾಗದಲ್ಲೇ ನಿನ್ನೆ ಈ ತಂಡ ನಿಂತಿತ್ತು ಎಂದು ಸಿರಾ ಟ್ವೀಟ್ ಮಾಡಿದ್ದಾರೆ.