‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರತೀಯ ಜನತಾ ಯುವ ಮೋರ್ಚಾದ 8 ಮಂದಿ ಕಾರ್ಯಕರ್ತರು ದಾಂಧಲೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರು. 14 ದಿನಗಳ ಬಳಿಕ ಇವರುಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದು ಬಿಡುಗಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಬಿಜೆಪಿ ಘಟಕ ತನ್ನ ಕಚೇರಿಯಲ್ಲಿ ಎಂಟು ಮಂದಿ ಯುವಕರಿಗೆ ಹಾರಹಾಕಿ ಸನ್ಮಾನ ಮಾಡಿದೆ.
ಶಿವಮೊಗ್ಗದ ವಿವಿಧೆಡೆ ಸಂತೋಷ್ ಪಾಟೀಲ್ ‘ಶ್ರದ್ಧಾಂಜಲಿ’ ಫ್ಲೆಕ್ಸ್
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್ ಗುಪ್ತ ಈ ಕುರಿತು ಟ್ವೀಟ್ ಮಾಡಿದ್ದು, ಬಿಜೆಪಿ ಯುವಮೋರ್ಚಾದ 8 ಮಂದಿ ಕಾರ್ಯಕರ್ತರು ಹಿಂದು ವಿರೋಧಿ ಕೇಜ್ರಿವಾಲ್ ವಿರುದ್ಧ ಪ್ರತಿಭಟಿಸಿದ ಕಾರಣಕ್ಕೆ ಜೈಲಿಗೆ ಹೋಗಿದ್ದರು. 14 ದಿನಗಳ ಬಳಿಕ ಅವರಿಗೆ ಜಾಮೀನು ದೊರಕಿದ್ದು, ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದಿದ್ದಾರೆ.