
ತಂತ್ರಜ್ಞಾನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ಆಪಲ್ ಇಂಕ್‌ನ ಮಾರುಕಟ್ಟೆ ಮೌಲ್ಯವು $3 ಲಕ್ಷ ಕೋಟಿ ಮಟ್ಟ ದಾಟಿದ್ದು, ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಹೊರತುಪಡಿಸಿ ಜಗತ್ತಿನ ಮಿಕ್ಕೆಲ್ಲಾ ದೇಶಗಳ ಜಿಡಿಪಿಗಿಂತಲೂ ಹೆಚ್ಚಿನದ್ದಾಗಿದೆ.
ಭಾರತದ ಜಿಡಿಪಿಯು 2020-21ರ ಪ್ರಕಾರ $2.71 ಲಕ್ಷ ಕೋಟಿಯಷ್ಟಿದೆ. ದೇಶಗಳ ಜಿಡಿಪಿಯನ್ನು ಕಂಪನಿಗಳ ಮಾರುಕಟ್ಟೆ ಮೌಲ್ಯದೊಂದಿಗೆ ಹೋಲಿಕೆ ಮಾಡುವುದು ತರವಲ್ಲವಾದರೂ ಸಹ ಜಾಗತಿಕ ತಾಂತ್ರಿಕ ದಿಗ್ಗಜರಾದ ಆಪಲ್, ಗೂಗಲ್‌ನ ಮಾತೃ ಸಂಸ್ಥೆ ಆಲ್ಫಬೆಟ್, ಮೈಕ್ರೋಸಾಫ್ಟ್ ಮತ್ತು ಟೆಸ್ಲಾಗಳ ಮಾರುಕಟ್ಟೆ ಮೌಲ್ಯಗಳು $1 ಟ್ರಿಲಿಯನ್ ದಾಟಿರುವುದು ಭಾರೀ ಸಾಧನೆಯೇ ಸರಿ.
ಮೆಟಾಗೆ ಸೇರ್ಪಡೆ ತಡೆಯಲು ತನ್ನ ಉದ್ಯೋಗಿಗಳಿಗೆ ಭರ್ಜರಿ ಬೋನಸ್ ನೀಡಿದ ಆಪಲ್ ಇಂಕ್..!
ಆಪಲ್‌ನ ಮಾರುಕಟ್ಟೆ ಮೌಲ್ಯವು ಮೂರು ವರ್ಷಗಳ ಅವಧಿಯಲ್ಲಿ ಮೂರು ಪಟ್ಟಾಗಿ ಬೆಳೆದಿದೆ. ಆಗಸ್ಟ್ 2018ರಲ್ಲಿ $1 ಟ್ರಿಲಿಯನ್ ದಾಟಿದ್ದ ಆಪಲ್‌ನ ಮಾರುಕಟ್ಟೆ ಮೌಲ್ಯವು ಆಗಸ್ಟ್ 2020ರಲ್ಲಿ $2 ಟ್ರಿಲಿಯನ್ ದಾಟಿತ್ತು.