ಇದೀಗ ತಾನೇ ಸೇಬು, ಅವೋಕ್ಯಾಡೋಗಳು ಸೇರಿದಂತೆ ತಮ್ಮ ಪಥ್ಯಕ್ಕೆ ಬೇಕಾದ ಹೊಸ ಸ್ಟಾಕ್ ಪಡೆದು ನವಹುಮ್ಮಸ್ಸಿನಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರವ ಗಗನವಾಸಿಗಳು ಬಹಳ ಮುಖ್ಯವಾದ ಕೆಲಸವೊಂದನ್ನು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
’ಎಕ್ಸ್‌ಪೆಡಿಷನ್ 65’ ಮಿಶನ್‌ನ ಸಿಬ್ಬಂದಿ ತಾವಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆಯನ್ನು ಸುಗಮವಾಗಿಸಲು ಸೋಲಾರ್ ಫಲಕಗಳನ್ನು ಅಳವಡಿಸಲಿದ್ದಾರೆ. ಇದಕ್ಕಾಗಿ ಗಗನವಾಸಿಗಳು ಎರಡು ಬಾರಿ ಬಾಹ್ಯಾಕಾಶ ನಡಿಗೆ ಮಾಡಲಿದ್ದಾರೆ.
ಉದ್ಯೋಗಿಗಳಿಗೆ ಖುಷಿ ಸುದ್ದಿ….! ಶೀಘ್ರವೇ ಹೆಚ್ಚಾಗಲಿದೆ ಪಿಎಫ್ ಹಣ
ಫ್ಲೈಟ್ ಇಂಜಿನಿಯರ್‌ಗಳಾದ ಶೇನ್ ಕಿಂಬ್ರೋ ಮತ್ತು ಥಾಮಸ್ ಪೆಸ್ಕೆ ನಡೆಸಲಿದ್ದು, ಇದಕ್ಕಾಗಿ ತಮ್ಮ ಬಾಹ್ಯಾಕಾಶವಸ್ತ್ರಗಳನ್ನು ಸಿದ್ಧವಿಟ್ಟುಕೊಂಡಿದ್ದಾರೆ. ಜೂನ್ 16 ಮತ್ತು ಜೂನ್ 20ರಂದು ಈ ಸ್ಪೇಸ್‌ವಾಕ್ ನ್ನು ಗಗನಯಾನಿಗಳು ಮಾಡಲಿದ್ದಾರೆ. ಈ ಹಿಂದೆ 2017ರಲ್ಲಿ ಎಕ್ಸ್‌ಪೆಡಿಷನ್ 50ರ ಸಂದರ್ಭದಲ್ಲಿ ಇದೇ ಜೋಡಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾಗಿತ್ತು.
ಮರದಿಂದ ತಯಾರಾಗಿದೆ ಐಷಾರಾಮಿ ಕಾರು….!
ರೇಷನ್ ಹಾಗೂ ಇತರ ಅಗತ್ಯ ವಸ್ತುಗಳಿರುವ 3,311 ಕಿಲೋಗ್ರಾಂನಷ್ಟು ದಾಸ್ತಾನು ಹೊತ್ತು ತಂದಿರುವ ಡ್ರಾಗನ್ ಗಗನನೌಕೆಯಿಂದ ಬಂದ ವಸ್ತುಗಳನ್ನು ಜೋಡಿಸಿಕೊಂಡು, ವಿಪರೀತ ವಾತಾವರಣದಲ್ಲಿ ಬದುಕುವುದು ಹೇಗೆಂದು ಮಾಡುತ್ತಿರುವ ಅಧ್ಯಯನವನ್ನು ಮುಂದುವರೆಸಿದ್ದಾರೆ ಗಗನವಾಸಿಗಳು. ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಮಾನವರನ್ನು ಕಳುಹಿಸುವ ನಿಟ್ಟಿನಲ್ಲಿ ಈ ಅಧ್ಯಯನವನ್ನು ನಡೆಸಲಾಗುತ್ತಿದೆ.