ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯ ಪರಿಸರದಲ್ಲಿ ವಸ್ತುಗಳ ಚಲನೆ ಹೇಗಿರುತ್ತದೆ ಎಂಬ ಬಗ್ಗೆ ಕೇಳಿರುತ್ತಿರಿ. ಆದರೆ ಎಲ್ಲ ಘನ ಮತ್ತು ದ್ರವ ವಸ್ತುಗಳು ಒಂದೇ ರೀತಿಯಲ್ಲಿ ವರ್ತಿಸುವುದಿಲ್ಲ. ಇನ್ನು ಬಾಹ್ಯಾಕಾಶದಲ್ಲಿ ಯಾರಾದರೂ ಜೇನುತುಪ್ಪದ ಪಾತ್ರೆಯನ್ನು ತೆರೆದರೆ ಹೇಗಿರಬಹುದು ಅಂತಾ ಯೋಚಿಸಿದ್ದಾರಾ..?
ಹೌದು, ಗಗನಯಾತ್ರಿಯೊಬ್ಬರು ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಜೇನುತುಪ್ಪ ಚಲಿಸುವ ದೃಶ್ಯವನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕೆನಡಾ ಸ್ಪೇಸ್ ಏಜೆನ್ಸಿಯ ಗಗನಯಾತ್ರಿ ಡೇವಿಡ್ ಸೈಂಟ್ ಜಾಕ್ವೆಸ್ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
BIG NEWS: ಬಿ.ಎಲ್.ಸಂತೋಷ್, ಧರ್ಮೇಂದ್ರ ಪ್ರಧಾನ್ ಭೇಟಿಯಾದ ಸಿಎಂ ಬೊಮ್ಮಾಯಿ
ಜೇನುತುಪ್ಪವಿದ್ದ ಬಾಟಲಿಯ ಮುಚ್ಚಳವನ್ನು ತೆರೆದಾಗ, ಅದು ಹಿಗ್ಗಲು ಪ್ರಾರಂಭಿಸುತ್ತದೆ. ಆದರೆ ಏನೇ ಮಾಡಿದ್ರೂ ಮುರಿಯುವುದಿಲ್ಲ. ಕೆಲವು ಸೆಕೆಂಡ್ ಗಳ ನಂತರ ಚಾಚಿದ ಜೇನುತುಪ್ಪವನ್ನು ಸುತ್ತಾಡಿಸಿದರು ಮತ್ತು ಜೇನನ್ನು ಸುರುಳಿಯಾಕಾರದಲ್ಲಿ ತಿರುಗಿಸಿದರೂ ಕೂಡ ಅದು ಮುರಿಯಲಿಲ್ಲ ಬದಲಾಗಿ ಸುರುಳಿಯಾಕಾರದಿ ಸುತ್ತಿತು.
‘’ನೀವು ಗುರುತ್ವಾಕರ್ಷಣೆಯನ್ನು ತೆಗೆದುಹಾಕಿದಾಗ ವಿಚಿತ್ರವಾದ ಘಟನೆಗಳು ನಡೆಯುತ್ತವೆ’’ ಎಂದು ಡೇವಿಡ್ ಹೇಳಿದ್ದಾರೆ. ಈ ವಿಡಿಯೋವನ್ನು ಕೆನಡಿಯನ್ ಸ್ಪೇಸ್ ಏಜೆನ್ಸಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದು, 49 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.