ಮನೆಯು ಸುಖ ಸಂತೋಷದಿಂದ ಕೂಡಿರಬೇಕು ಎಂದರೆ ಅಲ್ಲಿ ವಾಸ್ತು ನಿಯಮಗಳು ಸರಿಯಾಗಿ ಪಾಲನೆ ಮಾಡಬೇಕು ಅಂತಾ ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರ ಅನ್ನೋದು ಕೇವಲ ಮನೆಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ನಡವಳಿಕೆಗಳ ಮೇಲೂ ಅವಲಂಭಿತವಾಗಿರುತ್ತದೆ. ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಕೆಲವೊಂದು ವಸ್ತುಗಳನ್ನು ಬೀಳಿಸಿಬಿಡುತ್ತೇವೆ , ಹೀಗೆ ನಮಗೆ ಅರಿವಿಲ್ಲದಂತೆ ಕೆಲವು ವಸ್ತುಗಳು ಕೈ ಜಾರಿ ನೆಲಕ್ಕೆ ಬಿದ್ದರೆ ಏನು ಅರ್ಥವೆಂದು ತಿಳಿದುಕೊಳ್ಳೋಣ :
ದೇವರ ಮೂರ್ತಿ :ದೇವರ ಮೂರ್ತಿಯನ್ನು ಸ್ಥಳಾಂತರಿಸುವಾಗ ಭಾರೀ ಜಾಗೃತೆ ಇರಬೇಕು. ಒಂದು ವೇಳೆ ದೇವರ ಮೂರ್ತಿ ಕೈ ಜಾರಿ ಬಿದ್ದರೆ ಇದನ್ನು ಕೆಟ್ಟ ಅಪಶಕುನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕುಟುಂಬದಲ್ಲಿ ಕೆಲವು ಸಂಬಂಧಗಳು ಹಾಳಾಗುತ್ತದೆ, ಹಾಗೂ ದಾರಿದ್ರ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ನೆಲಕ್ಕೆ ಬಿದ್ದು ಭಿನ್ನವಾದ ಮೂರ್ತಿಯನ್ನು ಕೂಡಲೇ ಹರಿಯುವ ನೀರಿನಲ್ಲಿ ಬಿಡಬೇಕು.
ಪ್ರಸಾದ : ನಮ್ಮ ಕೈಲಿದ್ದ ಪ್ರಸಾದ ಎಂದಿಗೂ ಕೈ ತಪ್ಪಿ ಬೀಳಬಾರದು. ಇದು ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದರ್ಥವಾಗಿದೆ. ಇದರಿಂದ ಮನೆಯಲ್ಲಿ ದೊಡ್ಡ ತೊಂದರೆ ಬರುತ್ತದೆ ಎಂದು ಭವಿಷ್ಯ ಶಾಸ್ತ್ರ ಹೇಳುತ್ತದೆ. ಬಿದ್ದ ಪ್ರಸಾದವನ್ನು ಕೂಡಲೇ ಹರಿಯುವ ನೀರಿನಲ್ಲಿ ಬಿಡಬೇಕು ಅಥವಾ ಶುದ್ಧವಾದ ನೀರಿನ ಪಾತ್ರೆಗೆ ಹಾಕಿ ಕಲ್ಪವೃಕ್ಷದ ಬಳಿ ಇಡಬೇಕು.
ಕುಂಕುಮ : ಮಾಂಗಲ್ಯ ಮತ್ತು ಕುಂಕುಮಕ್ಕೆ ತುಂಬಾನೇ ಮಹತ್ವವಿದೆ. ಆದರೆ ಕೈಲಿರುವ ಕುಂಕುಮ ಕೈ ಜಾರಿ ಬಿದ್ದರೆ ಅದು ಗಂಡನಿಗೆ ಗಂಡಾತರ ಕಾದಿದೆ ಎಂಬುದರ ಸಂಖೇತವಾಗಿದೆ. ನೆಲಕ್ಕೆ ಬಿದ್ದ ಕುಂಕುಮವನ್ನು ಎಂದಿಗೂ ಪೊರಕೆಯಿಂದ ಸ್ಚಚ್ಛಗೊಳಿಸಬಾರದು. ಬಟ್ಟೆಯಿಂದ ಸಿಂಧೂರವನ್ನು ತೆಗೆಯಬೇಕು.