ವ್ಯಕ್ತಿ ಧರಿಸುವ ಪ್ರತಿಯೊಂದು ಆಭರಣವೂ ಆತನ ವ್ಯಕ್ತಿತ್ವ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ರತ್ನಗಳನ್ನು ಅಥವಾ ಲೋಹವನ್ನು ಧರಿಸುವಾಗ ಯಾವಾಗ್ಲೂ ಜಾತಕ ನೋಡಿ ಧರಿಸಬೇಕು ಎನ್ನಲಾಗುತ್ತದೆ. ಜಾತಕ ಹಾಗೂ ಗ್ರಹಕ್ಕೆ ಹೊಂದಿಕೆಯಾಗುವ ಲೋಹವನ್ನು ಮಾತ್ರ ಧರಿಸಬೇಕಾಗುತ್ತದೆ. ಅನೇಕ ಬಾರಿ ತಿಳಿಯದೆ ಲೋಹ ಅಥವಾ ರತ್ನವನ್ನು ಧರಿಸುವುದ್ರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೆಚ್ಚಿನ ಜನರು ತಾಮ್ರವನ್ನು ಇಷ್ಟಪಡ್ತಾರೆ. ತಾಮ್ರದ ಬಳೆ, ಉಂಗುರ ಸೇರಿದಂತೆ ಅನೇಕ ಆಭರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ತಾಮ್ರ ಧರಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಚೆಂದ ಎನ್ನುವ ಕಾರಣಕ್ಕೆ ಅದನ್ನು ಖರೀದಿಸುತ್ತಾರೆ. ಆದ್ರೆ ಎಲ್ಲರಿಗೂ ತಾಮ್ರ ಧರಿಸುವುದ್ರಿಂದ ಒಳ್ಳೆಯದಾಗುವುದಿಲ್ಲ ಎಂಬುದನ್ನು ನಾವು ಅರಿಯುವುದು ಬಹಳ ಮುಖ್ಯ.
ತಾಮ್ರ ಸೂರ್ಯನಿಗೆ ಸಂಬಂಧಿಸಿದ ಲೋಹವಾಗಿದೆ. ನಮ್ಮ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದರೆ ಅಥವಾ ಸೂರ್ಯನ ಕೃಪೆಗೆ ಪಾತ್ರರಾಗಲು ಬಯಸಿದ್ದರೆ ಮಾತ್ರ ನಾವು ತಾಮ್ರ ಧರಿಸಬೇಕು. ತಾಮ್ರದ ಪಾತ್ರೆಯಲ್ಲಿಯೇ ಸೂರ್ಯನಿಗೆ ಅರ್ಘ್ಯ ನೀಡುವುದು ಇದೇ ಕಾರಣಕ್ಕೆ.
ತಾಮ್ರವನ್ನು ಯಾವಾಗ ಧರಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ತಾಮ್ರದ ಬಳೆ ಅಥವಾ ಉಂಗುರವನ್ನು ಶಾರೀರಿಕ ಸಂಬಂಧ ಬೆಳೆಸುವ ಮಹಿಳೆ ಧರಿಸದೆ ಇದ್ದರೆ ಒಳ್ಳೆಯದು. ಶಾರೀರಿಕ ಸಂಬಂಧ ಬೆಳೆಸುವಾಗ ಮಹಿಳೆ ತಾಮ್ರದ ಯಾವುದೇ ಆಭರಣವನ್ನು ಧರಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.
ಸೂರ್ಯ ನಮ್ಮ ಕಣ್ಣಿಗೆ ಕಾಣುವ ದೇವರು. ಆತ ಕೋಪಗೊಂಡರೆ ಜೀವನದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆತನಿಗೆ ಸಂಬಂಧಿಸಿದ ಲೋಹವನ್ನು ಧರಿಸಿದಾಗ ನಾವು ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ನೀವು ತಾಮ್ರದ ಬಳೆ ಅಥವಾ ಉಂಗುರ ಧರಿಸಿದಾಗ ಯಾವುದೇ ಕಾರಣಕ್ಕೂ ಸುಳ್ಳು ಹೇಳಲು ಹೋಗ್ಬೇಡಿ. ಹಾಗೆಯೇ ಮೋಸದ ಕೆಲಸಗಳನ್ನು ಮಾಡಬಾರದು. ಒಂದ್ವೇಳೆ ನಿಯಮ ತಪ್ಪಿದ್ರೆ ಸೂರ್ಯ ದೇವನ ಕೋಪಕ್ಕೆ ಬಲಿಯಾಗಬೇಕಾಗುತ್ತದೆ.