ಜನವರಿ 22 ರಂದು ಶ್ರೀರಾಮನ ಜನನದ ಸಮಯದಲ್ಲಿ ರೂಪುಗೊಂಡಂತಹ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ಶ್ರೀರಾಮನ ದರ್ಶನ ಮತ್ತು ಪೂಜೆ ಮಾಡಿದರೆ ಶುಭವಾಗಲಿದೆ. ರಾಮನ ಪೂಜೆ ಜೊತೆ ನೀವು ದಾನವನ್ನು ಮಾಡಬೇಕು. ಇದು ನಿಮ್ಮ ಸಂತೋಷ, ಸಮೃದ್ಧಿಗೆ ಕಾರಣವಾಗುತ್ತದೆ. ಅಂದು ನೀವು ರಾಶಿಗೆ ಅನುಗುಣವಾಗಿ ಪ್ರಸಾದ ತಯಾರಿಸಿ, ದೇವರಿಗೆ ಅರ್ಪಿಸಿ, ಅದನ್ನು ದಾನ ನೀಡಬೇಕು.
ಮೇಷ ರಾಶಿ : ಜನವರಿ 22 ರಂದು ಬಡವರಿಗೆ ಖೀರ್ ದಾನ ಮಾಡಿ.
ವೃಷಭ ರಾಶಿ : ನೀವು ದೇವರಿಗೆ ವೀಳ್ಯದೆಲೆಯನ್ನು ಅರ್ಪಿಸಿ. ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚಕರಿಗೆ ದಕ್ಷಿಣೆ ನೀಡಿ.
ಮಿಥುನ ರಾಶಿ : ಶ್ರೀರಾಮನಿಗೆ ರಾಜಭೋಗವನ್ನು ಅರ್ಪಿಸಿ, ಅದನ್ನು ಪ್ರಸಾದವಾಗಿ ಸ್ವೀಕರಿಸಿ.
ಕರ್ಕ : ಈ ರಾಶಿಯ ಜನರು ರಾಮನನ್ನು ಪೂಜಿಸಬೇಕು. ರಾಮನಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು. ನಂತ್ರ ಇದನ್ನು ದೇವರ ಮನೆಯಲ್ಲಿ ಇಡಬೇಕು.
ಸಿಂಹ : ದೇವರನ್ನು ಅಲಂಕರಿಸಿ, ಶ್ರದ್ಧೆಯಿಂದ ಪೂಜೆ ಮಾಡಿ. ಕಾಶ್ಮೀರದಲ್ಲಿ ಪ್ರಸಿದ್ಧವಿರುವ ಪಂಜರಿಯನ್ನು ದೇವರಿಗೆ ಅರ್ಪಿಸಿ ನಂತ್ರ ಅದನ್ನು ಮಕ್ಕಳಿಗೆ ನೀಡಿ.
ಕನ್ಯಾ ರಾಶಿ : ರಾಮನಿಗೆ ಖೀರ್ ಅರ್ಪಿಸಿ. ಹಾಗೆಯೇ ಪಂಚಾಮೃತವನ್ನು ಅರ್ಪಿಸಿ. ವಿಧವೆಯರಿಗೆ ಖೀರ್ ದಾನವಾಗಿ ನೀಡಿ.
ತುಲಾ ರಾಶಿ : ಇವರಿಗೆ ಶ್ರೀರಾಮನ ಆಶೀರ್ವಾದವಿದ್ದು, ಇವರು ದೇವರನ್ನು ಭಕ್ತಿಯಿಂದ ಪೂಜಿಸಿ ನೈವೇದ್ಯ ಅರ್ಪಿಸಬೇಕು.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಬಿಳಿ ಸಿಹಿಯನ್ನು ದೇವರಿಗೆ ಅರ್ಪಿಸಿ ಹೆಣ್ಣು ಮಕ್ಕಳಿಗೆ ತಿನ್ನಿಸಬೇಕು.
ಧನು ರಾಶಿ : ರಾಮನಿಗೆ ಮೊಸರನ್ನು ಅರ್ಪಿಸಿ. ನಂತ್ರ ಅದನ್ನು ಪ್ರಸಾದವಾಗಿ ಸ್ವೀಕರಿಸಿ.
ಮಕರ ರಾಶಿ : ದೇವರಿಗೆ ಪಂಚಾಮೃತವನ್ನು ಅರ್ಪಿಸಿ, ನಂತ್ರ ಚಿಕ್ಕ ಮಕ್ಕಳಿಗೆ ತಿನ್ನಿಸಿ.
ಕುಂಭ ರಾಶಿ : ಇವರು ದೇವರ ಹಾಡುಗಳನ್ನು ಹೇಳಬೇಕು. ಇದ್ರಿಂದ ಆಸೆ ಈಡೇರುತ್ತದೆ. ಬಾಳೆ ಹಣ್ಣನ್ನು ನೈವೇದ್ಯ ಮಾಡಿ ಬಡವರಿಗೆ, ಕೋತಿಗೆ ನೀಡಬೇಕು.
ಮೀನ ರಾಶಿ : ದೇವರಿಗೆ ಸಿಹಿಯಾದ ಪುರಿಯನ್ನು ತಯಾರಿಸಿ, ಪೂಜೆ ಮಾಡಿ ಅದನ್ನು ದೇವಸ್ಥಾನದಲ್ಲಿರುವ ಬ್ರಾಹ್ಮಣರಿಗೆ ನೀಡಿ.