ಇದು ಡಿಜಿಟಲ್ ಯುಗ. ನಿಮ್ಮ ಬಳಿ ಮೊಬೈಲ್ ಹಾಗೂ ಅಪ್ಲಿಕೇಷನ್ ಇದ್ರೆ ಸಾಕು. ಆರಾಮವಾಗಿ ಪೇಮೆಂಟ್ ಮಾಡಿ, ನಿಮ್ಮಿಷ್ಟದ ವಸ್ತು ಖರೀದಿ ಮಾಡಬಹುದು. ಇದೇ ಕಾರಣಕ್ಕೆ ಅನೇಕರು ಮನೆಯಿಂದ ಹೊರಗೆ ಹೋಗುವಾಗ ಮೊಬೈಲ್ ಇದ್ಯಾ ಅಂತ ಚೆಕ್ ಮಾಡ್ತಾರೆಯೇ ವಿನಃ ಪರ್ಸ್ ಇದ್ಯಾ ನೋಡೋದಿಲ್ಲ. ಈಗಿನ ದಿನಗಳಲ್ಲಿ ಪರ್ಸ್, ವಾಲೆಟ್ ತೆಗೆದುಕೊಂಡು ಹೋಗುವವರ ಸಂಖ್ಯೆ ಕಡಿಮೆ ಆಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ಮನೆಯಿಂದ ಹೊರಗೆ ಹೋಗುವಾಗ ವಾಲೆಟ್ ಅಥವಾ ಪರ್ಸ್ ಕೊಂಡೊಯ್ಯಬೇಕು. ನೀವು ಡಿಜಿಟಲ್ ಪೇಮೆಂಟ್ ಮಾಡಿ ಅಥವಾ ಬೇರೆ ಯಾವುದೇ ವಿಧಾನದಲ್ಲಿ ಪೇಮೆಂಟ್ ಮಾಡಿ, ಪರ್ಸ್ ನಲ್ಲಿ ಸ್ವಲ್ಪ ಹಣವನ್ನೂ ಇಟ್ಟುಕೊಳ್ಳಲು ಮರೆಯಬೇಡಿ. ಇದ್ರಿಂದ ಲಕ್ಷ್ಮಿ ಒಲಿಯುವುದಲ್ಲದೆ ದೇವರ ಆಶೀರ್ವಾದ ಸಿಗುತ್ತದೆ.
ನಿಮ್ಮ ಪರ್ಸ್ ನಲ್ಲಿ ನಾಣ್ಯ ಅಥವಾ ನೋಟಿನ ಜೊತೆ ಬೆಳ್ಳಿಯ ಗುಂಡು ಅಥವಾ ಬೆಳ್ಳಿಯ ಎಲೆಯನ್ನು ಕೂಡ ಇಟ್ಟುಕೊಳ್ಳಿ. ಬೆಳ್ಳಿ ಸಮೃದ್ಧಿಯ ಲೋಹವಾಗಿದೆ. ಹಾಗಾಗಿ ಅದನ್ನು ಪರ್ಸ್ ನಲ್ಲಿ ಇಡುವುದರಿಂದ ಶುಭವಾಗುತ್ತದೆ.
ಬೆಳ್ಳಿಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದ್ರಿಂದ ಯಾವುದೇ ಹಾನಿ ಆಗುವುದಿಲ್ಲ. ಲಕ್ಷ್ಮಿ ಆಶೀರ್ವಾದ ಸದಾ ನಿಮ್ಮ ಜೊತೆ ಇರುತ್ತದೆ. ಆರ್ಥಿಕ ವೃದ್ಧಿಯನ್ನು ನೀವು ಕಾಣಬಹುದಾಗಿದೆ.