ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡರೆ ಜೀವನ ಸುಧಾರಿಸಲಿದೆ. ಗರ್ಭಿಣಿಯರು ಕೂಡ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಬುದ್ಧಿವಂತ, ಸುಂದರ ಮಗು ಜನಿಸುತ್ತದೆ.
ಗರ್ಭಿಣಿಯರು ಮಲಗುವ ಕೋಣೆಯಲ್ಲಿ ನವಿಲು ಗರಿಯನ್ನು ಇಡಬೇಕು. ನವಿಲುಗರಿ ಕೃಷ್ಣನಿಗೆ ಪ್ರಿಯವಾದದ್ದು. ಮನೆ ಅಥವಾ ಗರ್ಭಿಣಿ ಕೋಣೆಯಲ್ಲಿ ನವಿಲುಗರಿಯಿಟ್ಟರೆ ತಾಯಿ ಹಾಗೂ ಮಗು ಇಬ್ಬರಿಗೂ ಒಳ್ಳೆಯದು.
ಹಳದಿ ಅಕ್ಕಿ ಮಂಗಳಕರ ಎಂದು ನಂಬಲಾಗಿದೆ. ಹಳದಿ ಅಕ್ಕಿಯನ್ನು ಗರ್ಭಿಣಿ ಮಲಗುವ ಸ್ಥಳದಲ್ಲಿ ಇಡಬೇಕು. ಇದು ತಾಯಿ ಹಾಗೂ ಮಗುವಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮಗು, ಗರ್ಭಿಣಿ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಬೀರದಂತೆ ತಡೆಯುತ್ತದೆ.
ಗರ್ಭಿಣಿ ಕೋಣೆಯಲ್ಲಿ ಶ್ರೀಕೃಷ್ಣ ಹಾಗೂ ತಾಯಿ ಯಶೋಧೆ ಫೋಟೋವನ್ನು ಇಡಬೇಕು. ಗರ್ಭಿಣಿ ಬೆಳಿಗ್ಗೆ ಎದ್ದ ತಕ್ಷಣ ಕಣ್ಣಿಗೆ ಬೀಳುವಂತೆ ಫೋಟೋವನ್ನು ಇಡಬೇಕು.
ಗುಲಾಬಿ ಬಣ್ಣ ಸಂತೋಷದ ಸಂಕೇತ. ಹಾಗಾಗಿ ಗರ್ಭಿಣಿ ಕೋಣೆಯಲ್ಲಿ ಗುಲಾಬಿ ಬಣ್ಣದ ಪೋಸ್ಟರ್ ಹಾಕಬೇಕು. ಇದು ಪ್ರತಿಭಾವಂತ ಮಗು ಜನನಕ್ಕೆ ಕಾರಣವಾಗುತ್ತದೆ.
ಗುಣವಂತ ಮಕ್ಕಳನ್ನು ಬಯಸುವವರು ಗರ್ಭಿಣಿ ಮಲಗುವ ಕೋಣೆಗೆ ಬಿಳಿ ಬಣ್ಣವನ್ನು ಹಚ್ಚಿ. ಇಲ್ಲವೆ ಬಿಳಿ ಬಣ್ಣದ ಮೂರ್ತಿಯನ್ನು ಕೋಣೆಯಲ್ಲಿ ಇಡಿ.