alex Certify ಹೇಗಿದೆ ನಿಮ್ಮ ರಾಶಿಫಲ…..? ಯಾರಿಗೆ ಕಾದಿದೆ ಶುಭಫಲ…..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ನಿಮ್ಮ ರಾಶಿಫಲ…..? ಯಾರಿಗೆ ಕಾದಿದೆ ಶುಭಫಲ…..? ಇಲ್ಲಿದೆ ಮಾಹಿತಿ

ಮೇಷ : ವಿದ್ಯಾರ್ಥಿಗಳು ಇಂದು ಹೆಚ್ಚು ಲವಲವಿಕೆಯಿಂದ ಇರಲಿದ್ದಾರೆ. ಕಚೇರಿಯಲ್ಲಿ ನೀವು ಮಾಡಿದ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಸಂಗಾತಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ನೀಡಲಿದ್ದಾರೆ. ಪೋಷಕರ ಆರೋಗ್ಯದ ಕಡೆಗೆ ಗಮನ ಇರಲಿ.

ವೃಷಭ : ರಾಜಕೀಯ ರಂಗದಲ್ಲಿ ಇರುವವರಿಗೆ ಶತ್ರುಗಳ ಕಾಟ ಹೆಚ್ಚಲಿದೆ. ನಿಮ್ಮ ಜೊತೆಗೆ ಇದ್ದುಕೊಂಡೇ ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ಯಾರನ್ನೂ ಅಷ್ಟು ಸುಲಭವಾಗಿ ನಂಬಬೇಡಿ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ.

ಮಿಥುನ : ನಿಮಗೆ ಆಗದವರು ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ದೃತಿಗೆಡಬೇಡಿ. ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಜಮೀನು ಖರೀದಿಗೆ ಮುಂದಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಪ್ರಗತಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ : ಕೃಷಿಕರಿಗೆ ಇಂದು ಲಾಭ ಕೂಡಿ ಬರಲಿದೆ. ಸಾರ್ವಜನಿಕ ಜಾಗಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದಿರಿ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆಯನ್ನು ನಿರೀಕ್ಷಿಸಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಶುಭ ಯೋಗವಿದೆ.

ಸಿಂಹ : ಉದ್ಯೋಗಕ್ಕಾಗಿ ಅರಸುತ್ತಿದ್ದವರಿಗೆ ಸಾಲು ಸಾಲು ಅವಕಾಶಗಲು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಶುಭಕಾರ್ಯ ನಡೆಸುವ ಬಗ್ಗೆ ಹಿರಿಯರ ಜೊತೆ ಚರ್ಚೆ ನಡೆಸಲಿದ್ದೀರಿ. ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಇದು ಲಾಭದ ದಿನ. ಜವಳಿ ಹಾಗೂ ಎಲೆಕ್ಟ್ರಾನಿಕ್​ ವಸ್ತು ವ್ಯಾಪಾರಿಗಳು ಕೊಂಚ ನಷ್ಟವನ್ನು ಅನುಭವಿಸಲಿದ್ದೀರಿ.

ಕನ್ಯಾ : ನೀವು ಮಾಡುವ ಕೆಲಸಗಳಿಗೆ ಸಾರ್ವಜನಿಕ ರಂಗದಲ್ಲಿ ಮನ್ನಣೆ ಸಿಗಲಿದೆ. ನಿಮ್ಮನ್ನು ನಾಶ ಮಾಡಲು ಶತ್ರುಗಳು ಪಿತೂರಿ ಹೂಡಿದ್ದಾರೆ. ಅವರ ಸಂಚಿಗೆ ಬಲಿಯಾಗದಂತೆ ಎಚ್ಚರ ವಹಿಸಿ. ಹಲ್ಲುನೋವಿನ ಸಮಸ್ಯೆಯಿಂದ ಇಡೀ ದಿನ ಕಿರಿಕಿರಿ ಅನುಭವಿಸುತ್ತೀರಿ. ಶಿವನನ್ನು ಆರಾಧಿಸಿ.

ತುಲಾ : ಕುಟುಂಬ ಸಮೇತ ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ಹೊಗಳುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂಬ ತಪ್ಪು ಭಾವನೆ ಬೇಡವೇ ಬೇಡ. ಕೈಲಾಗದ ಕೆಲಸಕ್ಕೆ ಮುಂದಾಗಿ ಕೈ ಸುಟ್ಟಿಕೊಳ್ಳಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ.

ವೃಶ್ಚಿಕ : ಕುಟುಂಬಸ್ಥರ ಎದುರು ಆದಷ್ಟು ಸಹನೆಯಿಂದ ವರ್ತಿಸಿ. ಕೋಪದ ಕೈಗೆ ಬುದ್ಧಿ ಕೊಟ್ಟು ಆತುರದ ನಿರ್ಧಾರ ಕೈಗೊಳ್ಳಬೇಡಿ. ಕೋರ್ಟ್ – ಕಚೇರಿ ವ್ಯವಹಾರದಲ್ಲಿ ನಿಮಗೆ ಮುನ್ನಡೆ ಕಾದಿದೆ. ನಿಮಗೆ ನಷ್ಟ ಎನಿಸುವ ಕೆಲಸವನ್ನು ನಯವಾಗಿ ತಿರಸ್ಕರಿಸಿ.

ಧನು : ಪರಿಸ್ಥಿತಿ ನಿಮ್ಮ ಪರವಾಗಿಯೇ ಇರೋದ್ರಿಂದ ಸಂಗಾತಿ ನಿಮ್ಮ ಮಾತನ್ನು ಕೇಳುತ್ತಾರೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಹಣದ ಆಸೆಗೆ ಅಡ್ಡದಾರಿ ಹಿಡಿಯಬೇಡಿ. ಮೊಸದ ಜೀವನ ಎಂದಿಗೂ ನಿಮಗೆ ನೆಮ್ಮದಿ ನೀಡಲಾರದು.

ಮಕರ : ಸಾಧ್ಯವಾದಲ್ಲಿ ನಿಮ್ಮ ನೆರೆ ಹೊರೆಯವರಿಗೆ ಸಹಾಯ ಮಾಡಿ. ಮಾತು ಕಮ್ಮಿ ಕೆಲಸ ಜಾಸ್ತಿ ಎಂದು ಹಿರಿಯರು ಹೇಳಿದ ಮಾತು ತಲೆಯಲ್ಲಿ ಇರಲಿ. ಮಕ್ಕಳು ನೀಡುವ ಗೌರವದಿಂದ ನೀವು ಸಂತುಷ್ಟರಾಗಲಿದ್ದೀರಿ. ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಕುಂಭ : ನಿಮ್ಮ ಮಾತುಕತೆ ಹಾಗೂ ಸಂವಹನಾ ಕೌಶಲ್ಯದಿಂದಾಗಿ ಕೆಲಸದಲ್ಲಿ ಬಡ್ತಿ ಸಿಗಲಿದೆ. ನೆನಪಿರಲಿ, ಇದರಿಂದ ನಿಮ್ಮ ಹಿತಶತ್ರುಗಳ ಸಂಖ್ಯೆ ಹೆಚ್ಚಾಗಲಿದೆ. ಮಕ್ಕಳು ತಪ್ಪು ಮಾಡಿದ್ದಾರೆಂದು ರೇಗದಿರಿ. ತಾಳ್ಮೆಯಿಂದ ಅವರನ್ನು ತಿದ್ದುವ ಕೆಲಸ ಮಾಡಿ.

ಮೀನ: ನಿಮ್ಮ ಸಂವಹನಾ ಕೌಶಲ್ಯದಿಂದಲೇ ಜನರನ್ನು ಆಕರ್ಷಿಸುತ್ತೀರಿ. ಹೀಗಾಗಿ ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಸದಾ ಮುನ್ನಡೆ ಇದೆ. ಹೊಸ ಮನೆ ನಿರ್ಮಾಣದ ಬಗ್ಗೆ ಹಿರಿಯರೊಂದಿಗೆ ಚರ್ಚೆ ನಡೆಸಲಿದ್ದೀರಿ. ಜೇಬಿನಲ್ಲಿ ಹಣ ಎಷ್ಟಿದೆ ಎಂದು ನೋಡಿಕೊಂಡು ಖರ್ಚು ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...