ಮೇಷ : ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಎದುರಾಗಲಿದೆ. ವೃತ್ತಿರಂಗದಲ್ಲಿ ಅನಿರೀಕ್ಷಿತ ಬದಲಾವಣೆಯೊಂದು ಸಂಭವಿಸಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ.
ವೃಷಭ : ಕಚೇರಿಯಲ್ಲಿ ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಮದುವೆ ಯೋಗ ಕೂಡಿಬರಲಿದೆ.
ಮಿಥುನ : ಕುಟುಂಬಸ್ಥರೊಂದಿಗೆ ಇಂದು ಹೆಚ್ಚಿನ ಸಮಯ ಕಳೆಯಲಿದ್ದೀರಿ. ಸಂಗಾತಿಯು ನಿಮಗೆ ಇಂದು ದೊಡ್ಡ ಸಪ್ರೈಸ್ ನೀಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಪ್ರವಾಸಿ ತಾಣಗಳಿಗೆ ತೆರಳುವ ಅವಕಾಶ ನಿಮ್ಮದಾಗಲಿದೆ.
ಕಟಕ : ಉದ್ಯೋಗದ ನಿಮಿತ್ತ ವಿದೇಶಿ ಪ್ರಯಾಣಕ್ಕೆ ತೆರಳುವ ಅವಕಾಶ ನಿಮ್ಮದಾಗಲಿದೆ. ಅಗ್ನಿಯಿಂದ ಇಂದು ನೀವು ಅಂತರವನ್ನು ಕಾಯ್ದುಕೊಳ್ಳಲೇಬೇಕು. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗೋದ್ರಿಂದ ನಿಮಗೆ ಅತಿಯಾದ ಚಿಂತೆ ಕಾಡಲಿದೆ.
ಸಿಂಹ : ಅತಿಯಾದ ವಿನಮೃತೆ ನಿಮಗೆ ಮುಳುವಾಗಲಿದೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಅವಕಾಶಗಳು ದೊರಕುವುದಿಲ್ಲ. ಇದ್ದುದರಲ್ಲೇ ಸಮಾಧಾನ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಜವಳಿ ಉದ್ಯಮಿಗಳಿಗೆ ಇದು ಶುಭ ದಿನವಾಗಿದೆ.
ಕನ್ಯಾ : ಅನಿರೀಕ್ಷಿತ ಮೂಲಗಳಿಂದ ನಿಮಗೆ ಧನಾಗಮನವಿದೆ. ಯಾವುದೇ ಕಾರಣಕ್ಕೂ ಸ್ನೇಹಿತರಿಗೆ ಸಾಲ ನೀಡಲು ಹೋಗಬೇಡಿ. ಕುಟುಂಬಸ್ಥರು ನಿಮ್ಮ ಮನಸ್ಸಿಗೆ ನೋವಾಗುವಂತೆ ವರ್ತಿಸಲಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳಬೇಡಿ.
ತುಲಾ : ಹಣ ಸಂಪಾದನೆಗೆ ಹೊಸ ಮಾರ್ಗವನ್ನು ಹುಡುಕಿಕೊಳ್ಳಲಿದ್ದೀರಿ. ಭೂಮಿ ಖರೀದಿ ಮಾಡುವವರಿಗೆ ಇದು ಯೋಗ್ಯ ದಿನವಾಗಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸ್ತ್ರೀಯರಿಗೆ ಲಾಭವಿದೆ.
ವೃಶ್ಚಿಕ : ಬಹಳ ದಿನಗಳ ಬಳಿಕ ಇಂದು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ಸಂಗಾತಿಯ ನಂಬಿಕೆ ಉಳಿಸಿಕೊಳ್ಳಲು ಹೆಣಗಾಡಬೇಕಾಗಿ ಬಂದೀತು.
ಧನು : ಅತ್ಯಮೂಲ್ಯ ವಸ್ತುವೊಂದನ್ನು ಕಳೆದುಕೊಂಡು ಕೊರಗಲಿದ್ದೀರಿ. ಮಹಿಳೆಯರಿಗೆ ಇದು ಶುಭದಿನವಾಗಿದೆ. ನೀವು ಬಯಸಿದ ಉದ್ಯೋಗ ನಿಮ್ಮನ್ನೇ ಹುಡುಕಿಕೊಂಡು ಬರಲಿದೆ.
ಮಕರ : ಸಂಗಾತಿಯ ನಡುವೆ ವಿನಾಕಾರಣ ವೈಮನಸ್ಯ ಮೂಡಲಿದೆ. ಕಚೇರಿ. ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಮನೆ ನಿರ್ಮಾಣದ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ. ಮನೆಯ ಹಿರಿಯ ಸದಸ್ಯರ ಆರೋಗ್ಯ ದಲ್ಲಿ ಏರುಪೇರು ಉಂಟಾಗಲಿದೆ.
ಕುಂಭ : ಸಂಗಾತಿಯ ಅತಿಯಾದ ಕೋಪವು ನಿಮಗೆ ಕಿರಿಕಿರಿ ತರಿಸಲಿದೆ. ಮಕ್ಕಳು ಓದಿನಲ್ಲಿ ಹಿಂದೆ ಬೀಳಲಿದ್ದಾರೆ. ಇದು ನಿಮ್ಮನ್ನು ಚಿಂತೆಗೆ ದೂಡಲಿದೆ. ಯಾವುದೇ ಕಾರಣಕ್ಕೂ ಇಂದು ಯಾರಿಗೂ ಸಾಲ ನೀಡಲು ಹೋಗಬೇಡಿ. ಈ ಹಣವು ನಿಮಗೆ ವಾಪಾಸ್ ಸಿಗೋದಿಲ್ಲ.
ಮೀನ : ಸಾರ್ವಜನಿಕ ಸ್ಥಳಗಳಲ್ಲಿ ನಾಲಗೆ ಮೇಲೆ ಹಿಡಿತವಿರಲಿ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಮಕ್ಕಳು ಓದಿನೆಡೆಗೆ ಲಕ್ಷ್ಯ ತೋರಲಿದ್ದಾರೆ. ಕುಲದೇವರನ್ನು ಪ್ರಾರ್ಥಿಸಿ.