
ವಿಜಯಪುರ: ಜ್ಯೋತಿಷ್ಯ ಹೇಳಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಮೂವರು ಜ್ಯೋತಿಷಿಗಳನ್ನು ವಿಜಯಪುರ ಜಿಲ್ಲೆ ತಿಕೋಟಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1.67 ಲಕ್ಷ ರೂ. ನಗದು, ಮೂರು ಮೊಬೈಲ್ ವರ್ಷಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಸುಂಕದಕಟ್ಟೆ ನಿವಾಸಿಗಳಾದ ಅಭಿಷೇಕ್ ಮಂಜುನಾಥ, ಮಹಾಂತೇಶ ನಾಮದೇವ ಶಾಸ್ತ್ರಿ, ಆಕಾಶ್ ಮಾತಾರಪ್ಪ ಶಿಂಧೆ ಬಂಧಿತ ನಕಲಿ ಜ್ಯೋತಿಷಿಗಳು.
ಆನ್ಲೈನ್ ನಲ್ಲಿ ಜ್ಯೋತಿಷ್ಯ ಹೇಳಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ತಿಕೋಟಾದ ಮಹಿಳೆ ಒಬ್ಬರನ್ನು ವಂಚಿಸಿದ್ದರು. ಕೌಟುಂಬಿಕ ಸಮಸ್ಯೆ ಪರಿಹಾರ ಮಾಡುವುದಾಗಿ ನಂಬಿಸಿದ್ದ ಇವರು ಪೂಜೆ ಪುನಸ್ಕಾರದ ಹೆಸರಲ್ಲಿ 1.67 ಲಕ್ಷ ರೂ.ಗಳನ್ನು ಖಾತೆಗೆ ಹಾಕಿಸಿಕೊಂಡಿದ್ದರು. ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧ್ಯಕ್ಷರಿಗೆ ಹೆಚ್.ಡಿ. ಆನಂದಕುಮಾರ್ ತಿಳಿಸಿದ್ದಾರೆ.