
ಬೆಂಗಳೂರಿನಲ್ಲಿ ಜ್ಯೋತಿಷಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಜ್ಯೋತಿಷಿ ಪ್ರಮೋದ್ ಅವರ ಮನೆಯಲ್ಲಿ ಹಲ್ಲೆ ಮಾಡಿ ನಗ, ನಾಣ್ಯ ದೋಚಲಾಗಿದೆ.
ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಇರುವ ಪ್ರಮೋದ್ ನಿವಾಸಕ್ಕೆ ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. 400 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ಹಾಗೂ 5 ಲಕ್ಷ ರೂ. ನಗದು ದೋಚಲಾಗಿದೆ. ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.