ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಆರಂಭವಾಗಿದೆ. ಎಲ್ಲೆಡೆ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶ್ರಾವಣ ಮಾಸದ ಪ್ರತಿದಿನ ಶಿವನ ಪೂಜೆಯ ಜೊತೆಗೆ ಉತ್ತಮ ಕಾರ್ಯಗಳನ್ನು ಮಾಡಿದ್ರೆ ಶಿವ, ಭಕ್ತನಿಗೆ ಒಲಿಯುತ್ತಾನೆ. ಸದಾ ಸುಖ, ಸಂಪತ್ತು, ನೆಮ್ಮದಿ ಮನೆ, ಮನಗಳಲ್ಲಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.
ಹಾಗಾಗಿ ಈ ಸಂದರ್ಭದಲ್ಲಿ ಶಿವನ ಧ್ಯಾನದ ಜೊತೆ ಕೆಲವೊಂದು ಕೆಲಸಗಳನ್ನು ನಿಷ್ಠೆಯಿಂದ ಮಾಡಿದ್ರೆ ಶಿವ ಒಲಿಯದೇ ಇರಲಾರ. ಭಗವಂತ ಶಿವನ ಪೂಜೆ ಹಾಗೂ ಅಭಿಷೇಕದಲ್ಲಿ ಬಿಲ್ವ ಪತ್ರೆಯನ್ನು ಬಳಸಬೇಕು. ಚತುರ್ಥಿ, ಅಷ್ಠಮಿ, ನವಮಿ, ಅಮಾವಾಸ್ಯೆ ಹಾಗೂ ಸಂಕ್ರಾಂತಿಯಂದು ಬಿಲ್ವ ಪತ್ರೆಯನ್ನು ಕೀಳುವಂತಿಲ್ಲ. ಹಾಗಾಗಿ ಹಳೆಯ ಬಿಲ್ವಪತ್ರೆಯನ್ನು ನೀರಿನಲ್ಲಿ ಶುದ್ಧಗೊಳಿಸಿ ಶಿವನಿಗೆ ಅರ್ಪಿಸಬಹುದು. ಉಳಿದ ದಿನಗಳಲ್ಲಿ ಹೊಸ ಬಿಲ್ವಪತ್ರೆಯ ಅಭಿಷೇಕ ಮಾಡಬೇಕು.
ಪ್ರತಿದಿನ ರುದ್ರಾ ಅಥವಾ ಶಿವನ ಷಡಕ್ಷರಿ ಮಂತ್ರ ಓಂ ನಮಃ ಶಿವಾಯವನ್ನು ಪಠಿಸಿ.
ಬೆಳಗಿನ ವೇಳೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಿ.
ಸ್ಫಟಿಕದ ಲಿಂಗವನ್ನು ಮನೆಯಲ್ಲಿ ಸ್ಥಾಪನೆ ಮಾಡಿ, ಅದಕ್ಕೆ ನಿಯಮಿತ ರೂಪದಲ್ಲಿ ಪೂಜೆ ಮಾಡಿ.
ಸಂಜೆ ವೇಳೆ ದೇವಸ್ಥಾನದಲ್ಲಿ ಎಣ್ಣೆಯ ದೀಪ ಹಚ್ಚಿರಿ. ಭಗವಂತ ಶಿವ ಹಾಗೂ ದೇವಿ ಪಾರ್ವತಿಯ ಆರಾಧನೆ ಮಾಡಿರಿ.
ಶ್ರಾವಣ ಮಾಸ ಮುಗಿಯುವವರೆಗೆ ಪ್ರತಿದಿನ ಶಿವನ ಆರಾಧನೆ ಮಾಡುತ್ತ ಬಂದಲ್ಲಿ ಆಯಸ್ಸು ಗಟ್ಟಿಯಾಗುವ ಜೊತೆಗೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.