ದೀಪಾವಳಿಯಂದು ಮಹಾಲಕ್ಷ್ಮಿ ಆಶೀರ್ವಾದ ಪಡೆಯಲು ಹಾಗೆ ಆಕೆಯನ್ನು ಪ್ರಸನ್ನಗೊಳಿಸಲು ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡ್ತಾರೆ. ಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಾಕಾಗೋದಿಲ್ಲ, ದೇವಿಯನ್ನು ಒಲಿಸಿಕೊಳ್ಳುವ ವಸ್ತುಗಳ ಬಗ್ಗೆ ತಿಳಿದಿರಬೇಕು.
ಯಾರ ಮನೆಯಲ್ಲಿ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳಿರುತ್ತವೆಯೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರ್ತಾಳೆ. ಅದಕ್ಕಾಗಿ 20 ರೂಪಾಯಿ ಖರ್ಚು ಮಾಡಿದ್ರೆ ಸಾಕು.
ದೀಪಾವಳಿಯ ದಿನ ಮನೆಗೆ ಉಪ್ಪಿನ ಪ್ಯಾಕೆಟ್ ತೆಗೆದುಕೊಂಡು ಬನ್ನಿ. ಇದನ್ನು ಅಡುಗೆ ಮಾಡುವಾಗ ಉಪಯೋಗಿಸಿ. ಹೀಗೆ ಮಾಡುವುದರಿಂದ ವರ್ಷಪೂರ್ತಿ ದೇವಿಯ ಕೃಪೆಗೆ ಪಾತ್ರರಾಗ್ತೀರಾ. ದೀಪಾವಳಿಯ ದಿನ ಉಪ್ಪಿನ ನೀರನ್ನು ಮನೆಯ ಎಲ್ಲ ಮೂಲೆಗೂ ಚಿಮುಕಿಸಿ. ಮನೆಯ ಈಶಾನ್ಯ ಮೂಲೆಯಲ್ಲಿ ಉಪ್ಪಿನ ಡಬ್ಬವನ್ನು ಇಡಬಹುದು.
ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯ ವಿಗ್ರಹದ ಬಳಿ ಕೊತ್ತಂಬರಿ ಬೀಜವನ್ನು ಇಡಿ. ಬೆಳಿಗ್ಗೆ ಮಡಿಕೆಗೆ ಕೊತ್ತಂಬರಿ ಬೀಜವನ್ನು ಬೀರಿ. ಮಾರನೇ ದಿನವೇ ಕೊತ್ತಂಬರಿ ಮೊಳಕೆಯೊಡೆದ್ರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ನಂಬಿಕೆ ಇದೆ.
ಕಮಲದ ಬೀಜವನ್ನು ತುಪ್ಪದಲ್ಲಿ ಬೆರೆಸಿ ದೇವಿಗೆ ಅರ್ಪಣೆ ಮಾಡಿದ ವ್ಯಕ್ತಿ ರಾಜನಂತೆ ಜೀವನ ನಡೆಸ್ತಾನೆಂಬ ನಂಬಿಕೆ ಇದೆ. ಇಲ್ಲವಾದ್ರೆ 108 ಕಮಲದ ಬೀಜಗಳಿಂದ ಮಾಲೆ ಸಿದ್ಧಪಡಿಸಿ ದೇವಿಗೆ ಅರ್ಪಣೆ ಮಾಡಬೇಕು. ಮನೆಯಲ್ಲಿ ಕಮಲದ ಬೀಜದ ಹಾರವಿದ್ದರೆ ಒಳ್ಳೆಯದು.
ಶುಭ ಮುಹೂರ್ತವನ್ನು ನೋಡಿ ಅರಿಶಿನದ ಹಳದಿ ಉಂಡೆ ಅಥವಾ ಕಪ್ಪು ಅರಿಶಿನವನ್ನು ಮನೆಗೆ ತನ್ನಿ. ಇದನ್ನು ಬಟ್ಟೆಯಲ್ಲಿ ಇಟ್ಟು ಸ್ಥಾಪನೆ ಮಾಡಿ.
ಜನರು ಅವರಿಗೆ ಅನುಕೂಲವಾಗುವಂತೆ ಕೊತ್ತಂಬರಿ, ಅರಿಶಿನ, ಕಮಲದ ಬೀಜ, ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಲಕ್ಷ್ಮಿ ದೇವಿಗೆ ಪೂಜೆ ಮಾಡಿ, ಹಣವಿಡುವ ಸ್ಥಳದಲ್ಲಿ ಇರಿಸಿ. ಇದರಿಂದ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.