
ಗ್ರಹ – ನಕ್ಷತ್ರಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹ ದೋಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹ ದೋಷದಿಂದ ಎದುರಾಗುವ ಸಮಸ್ಯೆಯನ್ನು ನಾವು ಚಿಕ್ಕ ಏಲಕ್ಕಿಯಿಂದ ಪರಿಹರಿಸಿಕೊಳ್ಳಬಹುದು.
ಕೆಲಸದಲ್ಲಿ ತೊಂದರೆಯಾದರೆ ಎರಡು ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ. ನೀರು ಅರ್ಧವಾದ್ಮೇಲೆ ಅದನ್ನು ಬಕೆಟ್ ಗೆ ಹಾಕಿ ಈ ನೀರಿನಿಂದ ಸ್ನಾನ ಮಾಡಿ. ಸ್ನಾನ ಮಾಡುವಾಗ ಭದ್ರಕಾಳಿ ಮಂತ್ರವನ್ನು ಜಪಿಸಿ. ಈ ಉಪಾಯ ಶುಕ್ರ ಗ್ರಹವನ್ನು ಬಲಪಡಿಸುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಆರ್ಥಿಕ ಬಿಕ್ಕಟ್ಟಿನಿಂದ ಬಳಲುವವರು ನೀವಾಗಿದ್ದರೆ ಪರ್ಸ್ನಲ್ಲಿ 5 ಹಸಿರು ಏಲಕ್ಕಿಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ.
ಗುರುವಾರದಂದು ಐದು ಚಿಕ್ಕ ಹಸಿರು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ. ಕನಿಷ್ಠ ಐದು ಗುರುವಾರಗಳ ಕಾಲ ಈ ಕೆಲಸ ಮಾಡಿದ್ರೆ ಅದೃಷ್ಟ ದೊರಕುತ್ತದೆ.
ಹಣದ ಸಮಸ್ಯೆ ಕಾಡುತ್ತಿದ್ದರೆ ಬಡವರಿಗೆ ನಾಣ್ಯವನ್ನು ದಾನ ಮಾಡಿ. ಹಸಿರು ಏಲಕ್ಕಿಯನ್ನು ತಿನ್ನುವುದ್ರಿಂದ ಬಡತನ ದೂರವಾಗುತ್ತದೆ.
ಉದ್ಯೋಗದಲ್ಲಿ ಪ್ರಗತಿ ಸಿಗಬೇಕು ಎನ್ನುವವರು ಏಲಕ್ಕಿಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಬೇಕು. ನಂತ್ರ ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗಬೇಕು.
ಶಿಕ್ಷಣದಲ್ಲಿ ಯಶಸ್ಸು ಸಿಗಬೇಕೆಂದ್ರೆ ವೀಳ್ಯದೆಲೆ ಮೇಲೆ ಐದು ಸಿಹಿತಿಂಡಿಗಳು ಮತ್ತು ಎರಡು ಏಲಕ್ಕಿಗಳನ್ನು ಹಾಕಿ ಅಶ್ವತ್ಥ ಮರದ ಕೆಳಗೆ ಇಡಬೇಕು. ಅದನ್ನು ಇಟ್ಮೇಲೆ ಹಿಂತಿರುಗಿ ನೋಡಬಾರದು.