alex Certify ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೆಜೆನಿಕಾ ತಯಾರಿಸಿದ ಕೊರೊನಾ ಲಸಿಕೆ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಕೋವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯಾನ್ಸೆಟ್​​ ವೈದ್ಯಕೀಯ ಜರ್ನಲ್​​ ಪ್ರಕಟವಾದ ವರದಿಯಲ್ಲಿ ಈ ಲಸಿಕೆ 70 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ದೃಢೀಕರಿಸಲಾಗಿದೆ.

ಕಳೆದ ವಾರ ಫೈಜರ್​ ಲಸಿಕೆಗೆ ಬ್ರಿಟನ್​ ಸರ್ಕಾರ ಅನುಮೋದನೆ ನೀಡಿದ ಬಳಿಕ ಫೈಜರ್​ ಲಸಿಕೆ ತುರ್ತು ಬಳಕೆಗೆ ಅನುಮತಿ ಪಡೆದ ಮೊದಲ ವ್ಯಾಕ್ಸಿನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೂ ಬ್ರಿಟನ್​ ಕೊರೊನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಮೊದಲ ದೇಶ ಎಂಬ ಕೀರ್ತಿ ಸಂಪಾದಿಸಿದೆ.
ಫೈಜರ್​ ಬಯೋಟೆಕ್​ ಕೊರೊನಾ ವಿರುದ್ಧ 95 ಪ್ರತಿಶತದಷ್ಟು ಪರಿಣಾಮಕಾರಿಯಾಗಿದ್ರೆ ಮೊರ್ಡೆನಾ 94 ಪ್ರತಿಶತದಷ್ಟು ಪರಿಣಾಮಕಾರತ್ವವನ್ನ ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...