alex Certify ಉಸಿರಾಟದ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಸಿರಾಟದ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಉಸಿರಾಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮವನ್ನು ಫಾಲೋ ಮಾಡಿ ಉಸಿರಾಟದ ಸಮಸ್ಯೆಯಿಂದ ನಿಮ್ಮನ್ನ ಕಾಪಾಡಿಕೊಳ್ಳಿ.

*ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ. ಧೂಳು, ಕೊಳೆಯನ್ನು ಸ್ವಚ್ಛ ಮಾಡಿಕೊಳ್ಳಿ. ಮನೆಯೊಳಗೆ ಧೂಳು ಬರದಂತೆ ನೋಡಿಕೊಳ್ಳಿ.

*ಕಾಲಕಾಲಕ್ಕೆ ನಿಮ್ಮ ಹಾಸಿಗೆಯನ್ನು ಬದಲಾಯಿಸುತ್ತೀರಿ. ಹಾಸಿಗೆ, ಬೆಡ್ ಶೀಟ್, ದಿಂಬಿನ ಕವರ್ ಗಳನ್ನು ವಾಶ್ ಮಾಡುತ್ತೀರಿ.

*ಸಾಕು ಪ್ರಾಣಿಗಳಿಂದ ದೂರವಿರಿ. ಅದರ ಕೂದಲು ನಿಮ್ಮ ಅಸ್ತಮಾ ಸಮಸ್ಯೆ ಹೆಚ್ಚಾಗಲು ಕಾರಣವಾಗಬಹುದು.

*ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳಿ. ಸೋಂಕುಗಳನ್ನು ತಡೆಗಟ್ಟಲು ಕೈಗಳನ್ನು ಆಗಾಗ ಸಾಬೂನಿನಿಂದ ವಾಶ್ ಮಾಡುತ್ತೀರಿ.

*ಉತ್ತಮ ಆಹಾರ ಸೇವಿಸಿ, ಎಣ್ಣೆ ತಿಂಡಿಗಳಿಂದ ದೂರವಿರಿ, ಶೀತ ಕಫಕ್ಕೆ ಕಾರಣವಾಗುವ ಹಣ್ಣು, ತರಕಾರಿಯಿಂದ ದೂರವಿರಿ. ಉಷ್ಣತೆಯಿಂದ ಕೂಡಿದ ಹಣ್ಣು ತರಕಾರಿ ಸೇವಿಸಿ.

*ಇನ್ಹೇಲರ್ ನ್ನು ನಿಮ್ಮ ಜೊತೆಯಲ್ಲೇ ಇಟ್ಟುಕೊಳ್ಳಿ. ಔಷಧಿಗಳನ್ನು ಸೇವಿಸಿ ವೈದ್ಯರ ಸಲಹೆ ಪಾಲಿಸಿ. ಮನೆಯಿಂದ ಹೊರಗೆ ಹೆಚ್ಚು ಹೋಗಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...