
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಭಾನುವಾರ ನಡೆದ ಮತ ಎಣಿಕೆಯು ಶೇಕಡಾ 1 ಕ್ಕಿಂತ ಕಡಿಮೆ ಮತದಾರರು ‘ನೋಟಾ’ ಆಯ್ಕೆಯನ್ನು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ತೆಲಂಗಾಣದಲ್ಲಿ ಭಾನುವಾರ ಮತ ಎಣಿಕೆ ನಡೆದರೆ, ಮಿಜೋರಾಂನಲ್ಲಿ ಸೋಮವಾರ ಮತ ಎಣಿಕೆ ನಡೆಯಲಿದೆ. ಮಧ್ಯಪ್ರದೇಶದಲ್ಲಿ ಒಟ್ಟು ಶೇ.77.15ರಷ್ಟು ಮತದಾನದಲ್ಲಿ ಶೇ.0.98ರಷ್ಟು ಮತದಾರರು ನೋಟಾ ಆಯ್ಕೆಗೆ ಮತ ಚಲಾಯಿಸಿದ್ದಾರೆ. ನೆರೆಯ ಛತ್ತೀಸ್ ಗಢದಲ್ಲಿ ಶೇ.1.26ರಷ್ಟು ಮತದಾರರು ನೋಟಾ ಬಟನ್ ಒತ್ತಿದ್ದಾರೆ.
ಇಲ್ಲಿ ಶೇ.76.3ರಷ್ಟು ಮತದಾನವಾಗಿತ್ತು. ಅಂತೆಯೇ, ರಾಜಸ್ಥಾನದಲ್ಲಿ ಶೇಕಡಾ 0.96 ರಷ್ಟು ಮತದಾರರು ನೋಟಾ ಆಯ್ಕೆಯನ್ನು ಚಲಾಯಿಸಿದ್ದಾರೆ. 74.62 ರಷ್ಟು ಮತದಾನವಾಗಿತ್ತು.