alex Certify ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಏರಿಕೆಯಾಗುತ್ತಲೆ ಇದೆ. ಹೀಗಿರುವಾಗ ಕೆಲವೇ ವಾರಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧವಾಗಿವೆ. ಚುನಾವಣಾ ಆಯೋಗವು ಈಗಾಗ್ಲೇ ಚುನಾವಣೆ ದಿನಾಂಕವನ್ನೂ ಪ್ರಕಟಿಸಿದೆ.

ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ಐದು ರಾಜ್ಯಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.‌ ಕಟ್ಟುನಿಟ್ಟಾದ ಕೊರೋನಾ ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚುನಾವಣೆಗಳನ್ನು ನಡೆಸಲು ಆಯೋಗ ನಿರ್ಧರಿಸಿದೆ.

ಭಾರತದಲ್ಲಿ ಕೊರೋನಾ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗಿದ್ದು, ಈ ಐದು ರಾಜ್ಯಗಳ ಅನೇಕ ಮತದಾರರಲ್ಲಿ ವೈರಸ್‌ ಪತ್ತೆಯಾಗಿದೆ. ಚುನಾವಣೆ ಹೊತ್ತಿಗೆ ಇನ್ನಷ್ಟು ಮತದಾರರು ಕೊರೋನಾಗೆ ತುತ್ತಾಗುವುದು ಖಚಿತ. ಆಗ ಅವರು ದೈಹಿಕವಾಗಿ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ಸೂಚಿಸಿರುವ ಚುನಾವಣಾ ಆಯೋಗ, ಕೊರೋನಾ ಸೋಂಕಿಗೆ ತುತ್ತಾಗಿರುವವರು ಹೇಗೆ ಮತ ಚಲಾಯಿಸಬಹುದು ಎಂದು ಪ್ರಕಟಿಸಿದೆ.

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಕೋವಿಡ್ ಸೋಂಕಿತ ರೋಗಿಗಳು ಭೌತಿಕವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ಬದಲು, ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಇದರಿಂದ ನಾಗರಿಕರ ಸುರಕ್ಷತೆ ಮತ್ತು ಮತದಾರರ ಮತ ನೀಡುವ ಹಕ್ಕು , ಕರ್ತವ್ಯ ಎಲ್ಲಾ ಅಂಶಗಳ ಪಾಲನೆಯಾಗುತ್ತದೆ ಎಂದು ಆಯೋಗ ತಿಳಿಸಿದೆ.

ಇನ್ನು ಕೊರೋನಾ ರೋಗ ಲಕ್ಷಣಗಳಿರುವವರ ಸಮಸ್ಯೆಗೂ ಪರಿಹಾರ ಸೂಚಿಸಿರುವ ಚಿನಾವಣಾ ಆಯೋಗ, ಅಂತವರಿಗೆ ಮತದಾನದ ನಿರ್ದಿಷ್ಟ ಸ್ಲಾಟ್ ನ ಆಯ್ಕೆ ನೀಡಿದೆ. ರೋಗಲಕ್ಷಣಗಳಿರುವ ಮತದಾರರು ಮೊದಲು ಬಂದು ಟೋಕನ್ ಪಡೆಯಬೇಕು, ಮತದಾನದ ಅವಧಿಯ ಅಂತಿಮ ಗಂಟೆಯಲ್ಲಿ ಹಿಂತಿರುಗಿ ಬಂದು ನಿರ್ದಿಷ್ಟ ಸಮಯದಲ್ಲಿ ದೈಹಿಕವಾಗೇ ಮತ ಚಲಾಯಿಸಬಹುದೆಂದು ಆಯೋಗ ತಿಳಿಸಿದೆ.

ಎಲ್ಲಾ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲು ಹೇಳಿರುವ ಆಯೋಗ, ಎಲ್ಲಾ ಚುನಾವಣಾ ಅಧಿಕಾರಿಗಳು ಕೋವಿಡ್ ಲಸಿಕೆಯ ಮೂರನೇ ಡೋಸ್ ಅನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಆದೇಶಿಸಿದೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...