ಕೋಲಾರ: ಬಿಲ್ ಮಂಜೂರು ಮಾಡಲು ಸತಾಯಿಸುತ್ತಿದ್ದ ಪಿಡಿಒ ಗೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ರಾಜೇಂದ್ರಹಳ್ಳಿಯಲ್ಲಿ ನಡೆದಿದೆ.
ರಾಜೇಂದ್ರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕೇಶವ ರೆಡ್ಡಿ ಎಂಬುವವರು ಪಿಡಿಒ ನರಸಿಂಹಮೂರ್ತಿಗೆ ಮನಬಂದಂತೆ ಥಳಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಂಗನವಾಡಿ ಕಟ್ಟಡ ನಿರ್ಮಾಣದ ಬಿಲ್ ಮಂಜೂರು ಮಾಡುವಂತೆ ಹಲವು ದಿನಗಳಿಂದ ಕೇಳುತ್ತಿದ್ದರೂ ಬಿಲ್ ಮಂಜೂರು ಮಾಡದೇ ಪಿಡಿಒ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಗ್ರಾಮ ಪಂಚಾಯ್ತಿ ಸದಸ್ಯ ಕೇಶವ ರೆಡ್ಡಿ, ಪಿಡಿಒನನ್ನು ಹಿಡಿದು ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.