ಬೆಂಗಳೂರು : ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಕಾರಿನ ಚಕ್ರಕ್ಕೆ ಕ್ಲಾಂಪ್ ಹಾಕಿದ್ದಕ್ಕೆ ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಕ್ರಕ್ಕೆ ಕ್ಯಾಂಪ್ ಹಾಕಿದಕ್ಕೆ ಕಾನ್ ಸ್ಟೇಬಲ್ ಉಮೇಶ್ ಮೇಲೆ ಕಾರಿನ ಮಾಲೀಕರು ಹಲ್ಲೆ ನಡೆಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ಮಾಡಿರುವ ಈ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕಾರು ನಿಲುಗಡೆ ಮಾಡಿದ್ದರು. ಹೀಗಾಗಿ ಕಾನ್ಸ್ ಟೇಬಲ್ ಉಮೇಶ್ ಅವರು ಎಎಸ್ಐ ಸೂಚನೆ ಮೇರೆಗೆ ಕಾರಿನ ಚಕ್ರಕ್ಕೆ ಕ್ಲ್ಯಾಂಪ್ ಹಾಕಿದ್ದರು. ಈ ವಿಚಾರಕ್ಕೆ ಕಾರಿನ ಮಾಲೀಕರು ದರ್ಪ ಮೆರೆದಿದ್ದು, ಕಾನ್ಸ್ ಟೇಬಲ್ ಸಮವಸ್ತ್ರ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನೋಪಾರ್ಕಿಂಗ್ ಸ್ಥಳಗಳಲ್ಲಿ ಕಾರು ನಿಲ್ಲಿಸದಂತೆ ಕಾರು ಮಾಲೀಕನಿಗೆ ಬುದ್ಧಿವಾದ ಹೇಳಿ ಕ್ಲಾಂಪ್ ತೆಗೆದಿದ್ದಾರೆ. ಆದರೂ ಕೆರಳಿದ ಕಾರಿನ ಮಾಲೀಕ ಹಾಗೂ ಆತನ ಸಂಬಂಧಿ ಏಕಾಏಕಿ ಉಮೇಶ್ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹಿಡಿದು ಎಳೆದಾಡಿ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.ಕಾರು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.