
ಅಸ್ಸಾಮಿನ ಅತಿ ಸಿರಿವಂತ ಯೂಟ್ಯೂಬರ್ ಎಂಬ ಹೆಗ್ಗಳಿಕೆ ಹೊಂದಿರುವ ಮುಸ್ತಫೀರ್ ರೆಹಮಾನ್ ಅವರನ್ನು ಜೋಗಿಗೋಪಾ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.
ವಿಡಿಯೋ ನಿರ್ಮಾಣದ ವೇಳೆ ಕಾನೂನು ಬಾಹಿರವಾಗಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಕೆಲವರಿಂದ ದೂರು ಬಂದ ಕಾರಣ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮಕ್ಕಳ ಹಕ್ಕು ಸಂರಕ್ಷಣಾ ಮಂಡಳಿಯಲ್ಲಿ ಈ ಹಿಂದೆ ದೂರು ದಾಖಲಾಗಿದ್ದು ಮುಸ್ತಫೀರ್ ಅವರಿಗೆ ನೋಟಿಸ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರದಂದು ಯೂಟ್ಯೂಬರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.