ಅಸ್ಸಾಂ ಚಹಾದ ಜನಪ್ರಿಯ ವೆರೈಟಿ ಮನೋಹರಿ ಗೋಲ್ಡ್ ಟೀ ಯಾವಾಗಲೂ ತನ್ನ ಉತ್ಕೃಷ್ಟ ಉತ್ಪನ್ನಗಳು ಹಾಗೂ ಅವುಗಳ ದುಬಾರಿ ಬೆಲೆಯಿಂದ ಆಗಾಗ ಸುದ್ದಿಯಲ್ಲಿರುತ್ತದೆ.
ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸಿರುವ ಮನೋಹರಿ ಗೋಲ್ಡ್ ಟೀ, ತನ್ನ ಚಹಾ ಪುಡಿಯನ್ನು ಹರಾಜೊಂದರಲ್ಲಿ 99,999 ರೂ./ಕಿಲೋ ದರದಲ್ಲಿ ಮಾರಾಟ ಮಾಡಿದೆ. ಈ ರೇಟನ್ನು ಕೊಟ್ಟು ಗೋಲ್ಡ್ ಟೀಯನ್ನು ಸೌರವ್ ಟೀ ಟ್ರೇಡರ್ಸ್ ಎಂಬ ವರ್ತಕರೊಬ್ಬರು ಖರೀದಿಸಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್
ಅಸ್ಸಾಂದ ಉತ್ತರಕ್ಕಿರುವ ಡಿಬ್ರೂಘಢ ಜಿಲ್ಲೆಯಲ್ಲಿರುವ ಮನೋಹರಿ ಚಹಾ ಎಸ್ಟೇಟ್‌ನಲ್ಲಿ ಮನೋಹರಿ ಗೋಲ್ಡ್ ಟೀ ಎಲೆಗಳನ್ನು ಬೆಳೆಯಲಾಗುತ್ತದೆ. ಹರಾಜೊಂದರಲ್ಲಿ ಚಹಾಗೆ ಪಾವತಿಸಲಾದ ಅತ್ಯಂತ ಹೆಚ್ಚಿನ ಬೆಲೆಯನ್ನು ಮನೋಹರಿ ಚಹಾ ಪಡೆದುಕೊಂಡಿದೆ.
ಇದಕ್ಕೂ ಮುನ್ನ, ಇದೇ ಅಸ್ಸಾಂನ ರಾಸೆಲ್ ಚಹಾ ಉದ್ಯಮದ ಡಿಕೋಮ್ ಎಸ್ಟೇಟ್‌ನಲ್ಲಿ ಕೈಗಳಲ್ಲೇ ತಯಾರಿತವಾದ ಗೋಲ್ಡನ್ ಬಟರ್‌ಫ್ಲೈ ಎಂಬ ಮಾದರಿಯ ಚಹಾವನ್ನು ಗೌಹಾಟಿ ಚಹಾ ಹರಾಜು ಕೇಂದ್ರದಲ್ಲಿ 75,000 ರೂ./ಕಿಲೋ ದರದಲ್ಲಿ ಮಾರಲಾಗಿತ್ತು.
ಜಗತ್ತಿನ ಚಹಾ ಬೆಳೆಯುವ ಪ್ರದೇಶಗಳಲ್ಲೇ ಅತಿ ದೊಡ್ಡದಾದ ಪ್ರದೇಶಗಳಲ್ಲಿ ಒಂದಾದ ಅಸ್ಸಾಂನಲ್ಲಿ ಕಳೆದ 200 ವರ್ಷಗಳಿಂದ ಚಹಾ ಉದ್ಯಮ ಬೆಳೆದುಕೊಂಡು ಬಂದಿದ್ದು, ಜಾಗತಿಕವಾಗಿ ಜನಪ್ರಿಯವಾದ ಚಹಾ ಎಲೆಗಳನ್ನು ಈ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ.