ಪೊಲೀಸರು ಇತ್ತೀಚೆಗೆ ಕ್ರಿಯಾತ್ಮಕವಾಗಿ ಎಚ್ಚರಿಕೆ ನೀಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಫೋಗ್ರಾಫಿಕ್ಸ್ ಬಳಸಿ ಮಾಹಿತಿ ನೀಡುವ ಬದಲು ಚಲನಚಿತ್ರದ ಡೈಲಾಗ್ಗಳನ್ನು ಬಳಸುವುದು, ಕ್ರೀಡಾಪಟುಗಳ ಸಾಧನೆಗಳನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೆಮ್ಗಳು, ಜೋಕ್ಗಳನ್ನೂ ಸಹ ಬಳಸುವುದುಂಟು.
ಒಟಿಪಿ ಕೇಳುವ ವಂಚಕರು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಸ್ಸಾಂ ಪೊಲೀಸರು ಜಾಗೃತಿಗಾಗಿ ಇಂಡಿಯನ್ ರ್ಯಾಪರ್ ಬಾಬಾ ಸೆಹಗಲ್ ಅವರನ್ನು ಬಳಸಿಕೊಂಡಿದ್ದಾರೆ.
ಹರ್ಜೀತ್ ಸಿಂಗ್ ಸೆಹಗಲ್, ಬಾಬಾ ಸೆಹಗಲ್ ಎಂದೇ ಜನಪ್ರಿಯರಾಗಿದ್ದಾರೆ. ಈ ಕಲಾವಿದ ಆಕರ್ಷಕ ಪ್ರಾಸಗಳು ಮತ್ತು ಜಿಂಗಲ್ಗಳಿಗೆ ಹೆಸರುವಾಸಿ.
ಬಿರಿಯಾನಿ, ಚಾಯ್, ಟೊಮೇಟೊ ಕೆಚಪ್ ಮತ್ತು ಆಹಾರಗಳಿಗೆ ಸಂಬಂಧಪಟ್ಟ ಹಾಡುಗಳನ್ನು ರಚಿಸುವುದರಲ್ಲೇ ಖ್ಯಾತರು. ಅವರ ಸಾಹಿತ್ಯವನ್ನು ಸಾಮಾನ್ಯವಾಗಿ ಸಿಲ್ಲಿ ಸಿಲ್ಲಿ ಎಂದು ಕರೆಯುತ್ತಾರೆ. ಆದರೂ ಅಸ್ಸಾಂನ ಪೋಲೀಸ್ ಪಡೆ ಮೋಸಗಾರರ ವಿರುದ್ಧ ಜನರನ್ನು ಎಚ್ಚರಿಸಲು ಇವರ ಕಂಟೆಂಟ್ ಬಳಸಿ ಗಮನ ಸೆಳೆದಿದ್ದಾರೆ.
ವಂಚಕರು ಒಟಿಪಿ ಕೇಳಿದಾಗ ಯಾವ ರೀತಿ ಉತ್ತರಿಸಬೇಕೆಂದು ರ್ಯಾಒರ್ ಹಾಡಿನ ತುಣುಕು ಬಳಸಲಾಗಿದೆ.
ಇತ್ತೀಚಿನ ಸಾರ್ವಜನಿಕ ಸೇವಾ ಪ್ರಕಟಣೆಯಲ್ಲಿ, ರ್ಯಾಪರ್ ಹಾಡಿನ ಜೊತೆಗೆ “ಸ್ಕಾಮರ್ಸ್ ಕೊ ಕರ್ದೊ ತುಮ್ ಕನ್ಫ್ಯೂಸ್; ಒಟಿಪಿ ಶೇರ್ ಕರ್ನೆ ಸೆ ಕರ್ ದೊ ರಿಫ್ಯೂಸ್’ ಎಂದು ಪೊಲೀಸರು ಎಚ್ಚರಿಕೆ ಸಂದೇಶದೊಂದಿಗೆ, ಥಿಂಕ್ ಬಿಫೋರ್ ಯು ಶೇರ್ ಹ್ಯಾಶ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿದೆ. ಜತೆಗೆ ರ್ಯಾಪರ್ನನ್ನೂ ಕೂಡ ಟ್ಯಾಗ್ ಮಾಡಿದೆ. ಅಸ್ಸಾಂ ಎಡಿಜಿಪಿ ಕೂಡ ಈ ಕ್ರಿಯಾಶೀಲ ಪೋಸ್ಟ್ ಹಂಚಿಕೊಂಡಿದ್ದು, ಟ್ವೀಟ್ ಮಾಡಿದ್ದಾರೆ.