alex Certify ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಫೋಟೋಗ್ರಾಫರ್​ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಫೋಟೋಗ್ರಾಫರ್​ ಅರೆಸ್ಟ್

ಗಾಯಗೊಂಡಿದ್ದ ಪ್ರತಿಭಟನಾಕಾರನ ಮೇಲೆ ಫೋಟೋಗ್ರಾಫರ್ ಹಲ್ಲೆ ನಡೆಸಿದ ಘಟನೆಯು ಆಸ್ಸಾಂನ ಸಿಪಾಝಾರ್​ ಪ್ರದೇಶದಲ್ಲಿ ನಡೆದಿದೆ. ಫೋಟೋಗ್ರಾಫರ್​ನನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಘಟನೆಯ ವಿಡಿಯೋ ವೈರಲ್​ ಆಗಿದೆ.‌

ವೈರಲ್​ ಆಗಿರುವ ವಿಡಿಯೋದಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದಿದ್ದ ವ್ಯಕ್ತಿಯು ಪ್ರತಿಭಟನಾಕಾರನ ದೇಹದ ಮೇಲೆಯೇ ಹಾರಿದ್ದಾನೆ. ಆಸ್ಸಾಂನ ದರ್ರಾಂಗ್​ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದ್ದು ಪೊಲೀಸರ ಜೊತೆ ಗುಂಪೊಂದು ಸಂಘರ್ಷ ನಡೆಸಿದೆ. ಜಟಾಪಟಿಯಲ್ಲಿ ಇಬ್ಬರು ಮೃತಪಟ್ಟಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ. ಈ ವೇಳೆ ಕ್ಯಾಮರಾಮ್ಯಾನ್​ ವ್ಯಕ್ತಿಯೊಬ್ಬನ ಎದೆಯ ಮೇಲೆ ಒದ್ದಿದ್ದಾನೆ.

ಈ ಘಟನೆಯ ಬಳಿಕ ಆಸ್ಸಾಂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಜ್ಯ ಸರ್ಕಾರದ ಪ್ರಚೋದನೆಯಿಂದಲೇ ಪೊಲೀಸರು ಈ ರೀತಿ ವರ್ತಿಸಿದ್ದಾರೆ ಎಂದು ಕುಟುಕಿದ್ದಾರೆ. ನಮ್ಮ ಸಹೋದರ ಹಾಗೂ ಸಹೋದರಿಯರ ಜೊತೆ ನಾವಿದ್ದೇವೆ. ಭಾರತದ ಯಾವುದೇ ಮಕ್ಕಳು ಈ ರೀತಿ ಶಿಕ್ಷೆ ಅನುಭವಿಸಲು ಸಾಧ್ಯವಿಲ್ಲ ಎಂದು ಟ್ವೀಟಾಯಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...