ಕ್ಯಾಚಾರ್ (ಅಸ್ಸಾಂ): ಪೊಲೀಯೊ ಲಸಿಕೆ ತೆಗೆದುಕೊಂಡ ನಂತರ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸೋನೈ ಕ್ಷೇತ್ರದ ಗಂಗಾನಗರ ಗ್ರಾಮದಲ್ಲಿ ನಡೆದಿದೆ.
ಡಿಸೆಂಬರ್ 21 ರಂದು ನವಜಾತ ಶಿಶುವಿಗೆ ಪೊಲೀಯೊ ಲಸಿಕೆಯನ್ನು ನೀಡಲಾಗಿತ್ತು. ಲಸಿಕೆ ನೀಡಿದ ತಕ್ಷಣ ಮಗು ವಾಂತಿ ಮಾಡಲು ಪ್ರಾರಂಭಿಸಿತು ಮತ್ತು ಅಸ್ವಸ್ಥಗೊಂಡಿತು. ನಂತರ ಮಗು ಪ್ರಾಣಬಿಟ್ಟಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಕೋಪಗೊಂಡ ಸ್ಥಳೀಯರು ಮಗುವಿನ ಸಾವಿಗೆ ಅಧಿಕಾರಿಗಳನ್ನು ದೂಷಿಸಿದರು ಮತ್ತು ವಿಷಯದ ಬಗ್ಗೆ ತನಿಖೆಗೆ ಒತ್ತಾಯಿಸಿದರು. ಇದೇ ರೀತಿಯ ಘಟನೆಯಲ್ಲಿ, ಅಕ್ಟೋಬರ್ 28 ರಂದು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ದಿಫುನಲ್ಲಿ ಪೋಲಿಯೊ ಲಸಿಕೆ ಪಡೆದ ಎರಡು ತಿಂಗಳ ಮಗು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.