ಅದೊಂದು ವಿಭಿನ್ನ ಬಗೆಯ ಪ್ರತಿಭಟನೆ. ಅಲ್ಲಿ ಜನರ ಗದ್ದಲಗಳಿರಲಿಲ್ಲ, ಧಿಕ್ಕಾರದ ಕೂಗಾಟಗಳಿರಲಿಲ್ಲ. ಆ ಪ್ರತಿಭಟನೆಯಲ್ಲಿ ಇದ್ದವರು ಇಬ್ಬರು ಮಾತ್ರ. ಒಂದು ಶಿವ ಮತ್ತು ಪಾರ್ವತಿ. ಪಿಎಂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಅಸ್ಸಾಂನ ನಾಗಾಂವ್ ಪೊಲೀಸರು ಈಗ ಅದೇ ಶಿವನನ್ನ ಕಂಬಿ ಹಿಂದೆ ಕಳುಹಿಸಲು ಮುಂದಾಗಿದ್ದರು.
ಅಸ್ಸಾಂ ನಾಗಾಂವ್‌ನಲ್ಲಿ ಇಬ್ಬರು ಶಿವ ಹಾಗೂ ಪಾರ್ವತಿ ದೇವಿಯ ವೇಷ ಧರಿಸಿ ದೇಶದ ಹಣದುಬ್ಬರದ ಬಗ್ಗೆ ನಾಟಕವಾಡಿದ್ದಾರೆ. ಇದು ಹಿಂದೂ ಸನಾತನ ಧರ್ಮದವರ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ನಾಗಾಂವ್ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆರೋಪಿಸಿ, ತೀವ್ರವಾಗಿ ಖಂಡಿಸಿದೆ.
ಬಿರಿಂಚಿ ಬೋರಾ ಮತ್ತು ಕರಿಷ್ಮಾ, ಶಿವ ಮತ್ತು ಪಾರ್ವತಿ ವೇಷ ಧರಿಸಿ ನಾಟಕ ಆಡಿದ ಕಲಾವಿದರು. ಇಂಧನ, ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯನ್ನ ಪ್ರತಿಭಟಿಸಲು ರಸ್ತೆಗಿಳಿದು, ಬೀದಿ ನಾಟಕ ಆಡಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾಂವ್‌ನ ಕಾಲೇಜು ಚೌಕ್‌ಗೆ ಆಗಮಿಸಿ ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ನಾಟಕವಾಡಿದ್ದಾರೆ.
ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕಾ….? ನೀವು ಮಾಡಬೇಕಾಗಿರೋದು ಇಷ್ಟೆ
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಶಿವ ವೇಷಧಾರಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಅಲ್ಲಿದ್ದವರು ಕುತೂಹಲದಿಂದ ನೋಡಿದ್ದಾರೆ. ಹಾಗೂ ಪಾತ್ರಧಾರಿಗಳು ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದ್ದಾರೆ.
ಇದಾದ ಬಳಿಕ ಅಲ್ಲಿನ ಬಡಾಬಜಾರ್ ಪ್ರದೆಶಕ್ಕೆ ಹೋಗಿ, ಇದೇ ರೀತಿ ಬೀದಿ ನಾಟಕ ಆಡಿದ್ದಾರೆ. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಗಮನಕ್ಕೆ ಬಂದಿದ್ದು ಅವರಿಬ್ಬರೂ ಹಿಂದೂ ಭಾಗನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಗರಂ ಆಗಿದ್ದಾರೆ.
ಶಿವ-ಪಾರ್ವತಿ ಪಾತ್ರಧಾರಿಗಳಾದ ಬಿರಿಂಚಿ ಬೋರಾ ಹಾಗೂ ಕರೀಶ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಶಿವ ಪಾತ್ರಧಾರಿ ಬೋರಾನನ್ನ ಬಂಧಿಸಲಾಗಿತ್ತು. ಆದರೆ ಈಗ ಶಿವ ಪಾತ್ರಧಾರಿ ಬಿರಿಂಚಿ ಬೋರಾನನ್ನ ವಾರ್ನಿಂಗ್ ಕೊಟ್ಟು ಬಿಡುಗಡೆ ಮಾಡಲಾಗಿದೆ. ಈ ರೀತಿ ಮತ್ತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಕೆಲಸ ಮಾಡಿದರೆ ಮತ್ತೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆಯನ್ನ ಕೊಟ್ಟಿದ್ದಾರೆ.