ಅಸ್ಸಾಂ ಸರ್ಕಾರವು ಲಸಿಕೆ ಅಭಿಯಾನದಲ್ಲಿ ತೊಡಗಿರುವ ರಾಜ್ಯದ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಪ್ರತಿ ಸಹಾಯಕ ನರ್ಸ್ ಮಿಡ್‌ವೈಫ್‌ಗೆ (ಎಎನ್‌ಎಂ) ಲಸಿಕೆ ಅಭಿಯಾನ ಮುಗಿಯುವವರೆಗೆ ಅವರ ಮಾಸಿಕ ವೇತನದೊಂದಿಗೆ ತಿಂಗಳಿಗೆ ರೂೂ. 1,500 ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಜನವರಿಯಿಂದ ಮಾರ್ಚ್ 31 ರವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಆಶಾ ಕಾರ್ಯಕರ್ತೆಯರು ಮತ್ತು ಲಸಿಕೆ ಪರಿಶೀಲಕರಿಗೂ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದ್ದು, ಮಾರ್ಚ್ 31 ರವರೆಗೆ ರಾಜ್ಯದ ಪ್ರತಿ ಆಶಾ ಕಾರ್ಯಕರ್ತೆಯರಿಗೆ 1,000 ರೂ. ಮೇಲ್ವಿಚಾರಕರಿಗೆ 1,500 ರೂ. ಪ್ರೋತ್ಸಾಹ ಧನ ನೀಡುತ್ತೇವೆ. ರಾಜ್ಯ ಆರೋಗ್ಯ ಇಲಾಖೆ ಶೀಘ್ರವೇ ಈ ಪಟ್ಟಿಯನ್ನು ನೀಡಲಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 80 ಡೋಸ್ ಕೋವಿಡ್ ಲಸಿಕೆಗಳ ದಾಸ್ತಾನು ಇದೆ. ಅಸ್ಸಾಂ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜನವರಿ 7 ರವರೆಗೆ, ರಾಜ್ಯದಲ್ಲಿ 3.87 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನ ನೀಡಲಾಗಿದೆ. ಇವುಗಳಲ್ಲಿ, 1.62 ಕೋಟಿ ಫಲಾನುಭವಿಗಳು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಿಎಂ ಹೇಳಿದ್ದಾರೆ.