ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ ಮೌಲ್ಯವಿದೆ. ಇದು ಮತ್ತೊಮ್ಮೆ ಸಾಬೀತಾಗಿದೆ.
ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ (GTAC) ಒಂದು ಕೆಜಿ ಅಸ್ಸಾಂ ಗೋಲ್ಡನ್ ಪರ್ಲ್ ಟೀ ಸುಮಾರು 1 ಲಕ್ಷ ರೂ.ಗೆ ಮಾರಾಟವಾಗಿದೆ. ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ನಹೋರ್ಚುಕ್ಬರಿ ಗೋಲ್ಡನ್ ಪರ್ಲ್ ಎಂಬ ವಿಶೇಷ ಹ್ಯಾಂಡ್ ಕ್ರಾಫ್ಟೆಡ್ ಚಹಾವು ಪ್ರತಿ ಕೆಜಿಗೆ 99,999 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಪರ್ಕಾನ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮೂಲಕ ವಿಶೇಷ ಚಹಾವನ್ನು ಹರಾಜು ಕೇಂದ್ರದಲ್ಲಿ ಮಾರಾಟ ಮಾಡಲಾಯಿತು ಅಸ್ಸಾಂ ಟೀ ವ್ಯಾಪಾರಿಗಳು ಪ್ರೀಮಿಯಂ ಚಹಾವನ್ನು ಖರೀದಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, “ಮನೋಹರಿ ಗೋಲ್ಡ್” ಚಹಾ ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿಗೆ 99,999 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಈಗ ದಿಬ್ರುಗಢ್‌ನ ಮನೋಹರಿ ಟೀ ಎಸ್ಟೇಟ್‌ಗೆ ಅದೇ ಬೆಲೆ ದೊರೆತಿದೆ.
ಗುವಾಹಟಿ ಟೀ ಹರಾಜು ಕೇಂದ್ರವು (GTAC) ವಿಶ್ವದ ಅತ್ಯಂತ ಜನನಿಬಿಡ ಚಹಾ ವ್ಯಾಪಾರ ಸೌಲಭ್ಯಗಳಲ್ಲಿ ಒಂದಾಗಿದೆ. ಇದು ಹೆಸರೇ ಹೇಳುವಂತೆ ಗುವಾಹಟಿಯಲ್ಲಿದೆ. ಅಸ್ಸಾಂ ಚಹಾ ಇದರ ಪ್ರಾಥಮಿಕ ಸರಕು. ಇದನ್ನು 1970 ರಲ್ಲಿ ಸ್ಥಾಪಿಸಲಾಯಿತು. ಇದು ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ CTC ಚಹಾ ಹರಾಜನ್ನು ಕಂಡಿದೆ.