alex Certify ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ

ಗುವಾಹಟಿ: ತಂದೆ-ತಾಯಿ ಅತ್ತೆ ಮಾವನನ್ನು ಭೇಟಿ ಮಾಡಲು ತೆರಳುವ ಸರ್ಕಾರಿ ನೌಕರರಿಗೆ ಎರಡು ದಿನ ಹೆಚ್ಚುವರಿ ರಜೆ ನೀಡಲಾಗುವುದು.

ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. 2022ರ ಜನವರಿ 6 ಮತ್ತು 7 ರಂದು ಎರಡು ದಿನಗಳ ಕಾಲ ಹೆಚ್ಚುವರಿ ರಜೆ ನೀಡಲು ತೀರ್ಮಾನಿಸಲಾಗಿದೆ.

ತಂದೆ-ತಾಯಿ ಮತ್ತು ಅತ್ತೆ -ಮಾವನನ್ನು ಭೇಟಿಯಾಗಲು ಹೋಗುವ ಸರ್ಕಾರಿ ನೌಕರರಿಗೆ ಜನವರಿ 6 ಮತ್ತು 7ನೇ ತಾರೀಖು ಎರಡು ದಿನ ಹೆಚ್ಚುವರಿ ರಜೆ ನೀಡಲಾಗುತ್ತದೆ. ಮುಂದಿನ ಎರಡು ದಿನಗಳ ಕಾಲ ಶನಿವಾರ ಮತ್ತು ಭಾನುವಾರ ಇರುವುದರಿಂದ ನೌಕರರಿಗೆ 4 ದಿನ ರಜೆ ಸಿಗಲಿದೆ. ನೌಕರರು ಕುಟುಂಬದವರೊಂದಿಗೆ 4 ದಿನ ಕಾಲ ಕಳೆಯಲು ಅನುಕೂಲವಾಗುವಂತೆ ರಜೆ ನೀಡಲು ನಿರ್ಧಾರ ಕೈಗೊಂಡಿರುವುದಾಗಿ ಅಸ್ಸಾಂ ಸಿಎಂ ಹಿಂತ್ ಬಿಸ್ವಾಶರ್ಮ ತಿಳಿಸಿದ್ದಾರೆ

ಈ ರಜೆ ಸೌಲಭ್ಯವನ್ನು ಕೆಳಹಂತದ ನೌಕರರಿಂದ ಹಿಡಿದು ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಕೂಡ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

ಹೊಸ ವರ್ಷದ ಆರಂಭದಲ್ಲಿ ಪ್ರತಿಯೊಬ್ಬರು ತಮ್ಮ ತಂದೆ-ತಾಯಿಯ ಆಶೀರ್ವಾದ ಪಡೆದಾಗ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತದೆ, ಇದರಿಂದ ಅವರು ರಾಜ್ಯದ ಹಿತಕ್ಕಾಗಿ ಉತ್ತಮವಾಗಿ ಕೆಲಸ ಮಾಡಬಹುದು ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಉದ್ಯೋಗಿಗಳಿಗೆ ತಮ್ಮ ವೃದ್ಧ ಪೋಷಕರೊಂದಿಗೆ ಸಮಯ ಕಳೆಯಲು ಪ್ರತಿ ವರ್ಷ ಹೆಚ್ಚುವರಿ ವಾರದ ರಜೆ ನೀಡುವುದಾಗಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸ್ವಾತಂತ್ರ್ಯ ದಿನದಂದು ಘೋಷಿಸಿದ್ದರು.

ಮಂತ್ರಿಗಳು ಹೊರಹೋಗಲು ಅರ್ಹರಲ್ಲದಿದ್ದರೂ, ಅವರ ಪೋಷಕರು ಅಥವಾ ಅತ್ತೆ ಮಾವನ ಜೊತೆಗೆ ಸಮಯ ಕಳೆಯಲು ಗೊತ್ತುಪಡಿಸಿದ ದಿನಗಳಲ್ಲಿ ಕೆಲಸದಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲು ಸರ್ಕಾರ ಅವರಿಗೆ ಅವಕಾಶ ನೀಡಿದೆ ಎಂದು ಶರ್ಮಾ ಹೇಳಿದ್ದಾರೆ.

2018 ರಲ್ಲಿ ಹಿಂದಿನ ಸಿಎಂ ಸರ್ಬಾನಂದ ಸೋನೋವಾಲ್ ಕ್ಯಾಬಿನೆಟ್‌ನಲ್ಲಿ ಹಣಕಾಸು ಸಚಿವರಾಗಿದ್ದ ಶರ್ಮಾ ಅವರು, ತಮ್ಮ ಅವಲಂಬಿತ ಪೋಷಕರನ್ನು ನೋಡಿಕೊಳ್ಳಲು ವಿಫಲರಾದ ಸರ್ಕಾರಿ ನೌಕರರ ವೇತನದ ಶೇಕಡ 10 ರಷ್ಟನ್ನು ಕಡಿತಗೊಳಿಸಲಾಗುವುದು ಎಂದು ಘೋಷಿಸಿದ್ದರು.

ಅಸ್ಸಾಂ ಉದ್ಯೋಗಿಗಳ ಪೋಷಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಮತ್ತು ಮಾನಿಟರಿಂಗ್ ಆಕ್ಟ್, 2017 ರ ನಿಯಮಗಳ ಅನ್ವಯ ಅವಲಂಬಿತ ಪೋಷಕರು ಮತ್ತು ಅಂಗವಿಕಲ ಒಡಹುಟ್ಟಿದವರ ಆರೈಕೆ ಕಡ್ಡಾಯಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...