ಇಂಗ್ಲೆಂಡ್ ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಓದುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಎಲ್ಲರ ಕನಸು ನನಸಾಗುವುದಿಲ್ಲ. ಆದರೆ ಅಸ್ಸಾಂ ನ 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಈ ಕನಸು ನನಸಾಗಿದ್ದು, ಅರನಿ ಎಸ್ ಹಜ಼ಾರಿಕ ತನ್ನ ಪದವಿ ವಿಧ್ಯಾಭ್ಯಾಸವನ್ನ ಆಕ್ಸ್‌ಫರ್ಡ್ ನಲ್ಲಿ ಮುಂದುವರೆಸಲಿದ್ದಾಳೆ.
ಹೌದು, ಗೌಹಾಟಿಯ ಚನ್ಮಾರಿಯ ಕೃಷ್ಣನಗರದ ಹೋಲಿ ಚೈಲ್ಡ್ ಶಾಲೆಯಲ್ಲಿ 12ನೇ ತರಗತಿ ಓದುತ್ತಿರುವ, ವಿದ್ಯಾರ್ಥಿನಿ ಅರನಿ ಎಸ್ ಹಜಾರಿಕಾ ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಥಾನ ಪಡೆಯುವ ಮೂಲಕ ಅಸ್ಸಾಂ ರಾಜ್ಯ ಮಾತ್ರವಲ್ಲ ಭಾರತವು ಹೆಮ್ಮೆ ಪಡುವಂತ ಸುದ್ದಿ ನೀಡಿದ್ದಾರೆ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಕ್ಸ್‌ಫರ್ಡ್ ನಲ್ಲಿ ಅರನಿ, ಸಂಸ್ಕೃತವನ್ನು ಅಧ್ಯಯನ ಮಾಡುವುದು ಖಾತರಿಯಾಗಿದೆ.
ಜೀವನ ನಿರ್ವಹಣೆಗೆ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ನಿರುದ್ಯೋಗಿಗೆ ಸೋಲು
1263ರಲ್ಲಿ ಸ್ಥಾಪಿತವಾದ ಆಕ್ಸ್‌ಫರ್ಡ್ ಗೆ ಪ್ರತಿ ವರ್ಷ, ವಿವಿಧ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರಪಂಚದಾದ್ಯಂತದ ಸುಮಾರು 25,000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅದರಲ್ಲಿ ಕೇವಲ 4,000 ವಿದ್ಯಾರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ಪ್ರವೇಶವನ್ನು ನೀಡಲಾಗುತ್ತದೆ.
ಪ್ರವೇಶಾತಿ ನೀಡುವುದಕ್ಕು ಮುನ್ನ ಹಲವು ಪರೀಕ್ಷೆಗಳನ್ನ ನೀಡಲಾಗುತ್ತದೆ. ಹಲವು ಗಂಟೆಗಳ ಕಾಲ ಸಂದರ್ಶನ ಮಾಡಲಾಗುತ್ತದೆ. ಆದರೆ ಅರನಿಯವರು ಈ ಎಲ್ಲಾ ಪರೀಕ್ಷೆಗಳನ್ನ ಎದುರಿಸಿ, ಸುದೀರ್ಘ ಪ್ರಯಾಸದಾಯಕ ಆನ್‌ಲೈನ್ ಸಂದರ್ಶನಗಳಲ್ಲಿ ಅಸಾಧಾರಣ ಅರ್ಹತೆಯನ್ನು ತೋರಿಸಿದ್ದಾರೆ. ಈ ಮೂಲಕ 17 ವರ್ಷದವರಾಗಿದ್ದರೂ, ಆಕ್ಸ್‌ಫರ್ಡ್ ನಲ್ಲಿ ಅಧ್ಯಯನ ಮಾಡಲು ಸೀಟು ಗಿಟ್ಟಿಸಿಕೊಂಡಿದ್ದಾರೆ. ಈ ಅಕ್ಟೋಬರ್‌ನಿಂದ ಪ್ರಾರಂಭವಾಗುವ ವಿಶ್ವವಿದ್ಯಾನಿಲಯದ ಮೂರು ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್‌ನಲ್ಲಿ ಹಿಂದೂ ಧರ್ಮವನ್ನು ಒಳಗೊಂಡಂತೆ, ಸಂಸ್ಕೃತವನ್ನು ಕಲಿಯಲು ಅರನಿಗೆ ಅವಕಾಶ ಸಿಕ್ಕಿದೆ.