ತೇಜ್ ಪುರ್: ಅಸ್ಸಾಂನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ 19 ವರ್ಷದ ವಿದ್ಯಾರ್ಥಿನಿ ಶಾರ್ಟ್ಸ್ ಧರಿಸಿ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದು, ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ.
ಅಸ್ಸಾಂನ ತೇಜ್ ಪುರದಲ್ಲಿ ನಡೆದ ಪ್ರವೇಶ ಪರೀಕ್ಷೆಗೆ ಹಾಜರಾಗಲು ಆಕೆಯ ಕಾಲುಗಳಿಗೆ ಬಟ್ಟೆ ಕಟ್ಟಲು ಒತ್ತಾಯಿಸಲಾಗಿದೆ. ಬುಧವಾರ ಘಟನೆ ನಡೆದಿದೆ. ಜೂಬ್ಲಿ ತಮುಲಿ ಎಂಬ ವಿದ್ಯಾರ್ಥಿನಿ ಈ ವರ್ಷದ ಕೃಷಿ ಪ್ರವೇಶ ಪರೀಕ್ಷೆಯನ್ನು ಗಿರಿಜಾನಂದ ಚೌಧರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಬರೆಯಬೇಕಿತ್ತು.
ಆಕೆ ಶಾರ್ಟ್ಸ್ ಧರಿಸಿದ್ದ ಕಾರಣ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅಧಿಕಾರಿಗಳು ಅನುಮತಿಸಲಿಲ್ಲ. ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ತೇಜ್‌ಪುರದ ಪರೀಕ್ಷಾ ಕೇಂದ್ರಕ್ಕೆ ಬರಲು ತನ್ನ ಊರಿನಿಂದ ಎರಡು ಗಂಟೆ ಪ್ರಯಾಣಿಸಿದ್ದಳು. ತನ್ನ ದಾಖಲೆಗಳನ್ನು ಪರೀಕ್ಷಾ ಅಧಿಕಾರಿಗಳಿಗೆ ತೋರಿಸಿದಾಗ ಬಟ್ಟೆ ಬದಲಿಸಿದ ನಂತರವೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದು, ಪ್ರವೇಶ ನಿರಾಕರಿಸಿದ್ದಾರೆ.
ಭದ್ರತಾ ಸಿಬ್ಬಂದಿ ನನ್ನನ್ನು ಆವರಣಕ್ಕೆ ಪ್ರವೇಶಿಸಲು ಅನುಮತಿಸಿದಾಗ, ನನ್ನನ್ನು ಪರೀಕ್ಷಾ ಹಾಲ್‌ನಲ್ಲಿ ಇವಿಜಿಲೇಟರ್ ತಡೆದರು. ಅವರು ನನಗೆ ಶಾರ್ಟ್ಸ್ ಧರಿಸಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು ಎಂದು ಜೂಬ್ಲಿ ತಿಳಿಸಿದ್ದಾಳೆ.
ಪರೀಕ್ಷಾ ನಿಯಂತ್ರಕರು ಪ್ಯಾಂಟ್ ಹಾಕಿಕೊಂಡರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದಾರೆ ಪರೀಕ್ಷಾ ಕೇಂದ್ರದ ಹೊರಗೆ ಕಾಯುತ್ತಿದ್ದ ಆಕೆಯ ತಂದೆ ಮಾರುಕಟ್ಟೆಗೆ ಧಾವಿಸಿ ಪ್ಯಾಂಟ್ ತಂದುಕೊಟ್ಟಿದ್ದಾರೆ. ಆಮೇಲೆ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಇದು ನನ್ನ ಜೀವನದ “ಅತ್ಯಂತ ಅವಮಾನಕರ ಅನುಭವ” ಎಂದು ಜೂಬ್ಲಿ ಹೇಳಿದ್ದು, ಅಸ್ಸಾಂ ಶಿಕ್ಷಣ ಸಚಿವ ರಾನೋಜ್ ಪೆಗುಗೆ ದೂರು ನೀಡಲು ಮುಂದಾಗಿದ್ದಾಳೆ.
ಹುಡುಗರು ಇಷ್ಟದ ಬಟ್ಟೆ ಧರಿಸಿದರೆ ಯಾರೂ ಏನನ್ನೂ ಹೇಳುವುದಿಲ್ಲ. ಆದರೆ, ಹುಡುಗಿ ಶಾರ್ಟ್ಸ್ ಧರಿಸಿದರೆ ಜನ ಬೆರಳು ತೋರಿಸುತ್ತಾರೆ. ಪರೀಕ್ಷೆಗೆ ಡ್ರೆಸ್ ಕೋಡ್ ಇಲ್ಲದಿದ್ದರೂ, ನನಗೆ ಪ್ರವೇಶ ನಿರಾಕರಿಸಲಾಯಿದೆ ಎಂದು ಜೂಬ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.