ರೈಲ್ವೇ ಹಳಿಗಳನ್ನು ದಾಟುವ ವೇಳೆ ಆನೆಗಳು ಗಾಯ ಮಾಡಿಕೊಂಡಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಬಹಳಷ್ಟು ಬಾರಿ ಆನೆಗಳನ್ನು ಕಂಡಾಗ ಇಂಜಿನ್‌ನ ಬ್ರೇಕ್ ಹಾಕುವಲ್ಲಿ ಲೋಕೋ ಪೈಲಟ್‌ಗಳು ನಿಧಾನ ಮಾಡುವ ಕಾರಣ ಆನೆಗಳ ಪ್ರಾಣಕ್ಕೇ ಸಂಚಕಾರ ಬರುವ ಸಾಧ್ಯತೆ ಇರುತ್ತದೆ.
ಈ ದೈತ್ಯ ಜೀವಿಗಳು ಸುರಕ್ಷಿತವಾಗಿ ಹಳಿ ದಾಟಲು ನೆರವಾಗಲು ಅಸ್ಸಾಂ ಅರಣ್ಯ ಇಲಾಖೆ ಆವಿಷ್ಕಾರೀ ಐಡಿಯಾವೊಂದನ್ನು ಮಾಡಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ ಆನೆಗಳ ಹಿಂಡು ಹಳಿ ದಾಟಲು ವಿಶೇಷ ರ‍್ಯಾಂಪ್ ಒಂದರ ವ್ಯವಸ್ಥೆ ಮಾಡಿರುವುದನ್ನು ನೋಡಬಹುದಾಗಿದೆ.
ಅರಣ್ಯ ಇಲಾಖೆಯ ಈ ಪ್ರಯತ್ನವನ್ನು ಬಹಳಷ್ಟು ಮಂದಿ ನೆಟ್ಟಿಗರು ಶ್ಲಾಘಿಸಿದ್ದಾರೆ. ಆನೆಗಳು ದೊಡ್ಡ ಪ್ರಮಾಣದಲ್ಲಿ ಹಳಿ ದಾಟುವಂಥ ಪ್ರದೇಶಗಳಲ್ಲಿ ಹಸಿರು ಕಾರಿಡಾರ್‌ಗಳನ್ನು ಸೃಷ್ಟಿಸಲು ಅನೇಕರು ಆಗ್ರಹಿಸಿದ್ದಾರೆ.