ಗುವಾಹಟಿ: ಅಸ್ಸಾಂನ ಬಿಜೆಪಿ ಶಾಸಕರೊಬ್ಬರ ಕಾರ್ ನಲ್ಲಿ ಇವಿಎಂ ಪತ್ತೆಯಾಗಿದ್ದು 4 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ.
ಏಪ್ರಿಲ್ 20 ರಂದು ರತಾಬಾರಿ, ಸೋನೈ ಮತ್ತು ಹಫ್ಲಾಂಗ್ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ ಎಂದು ಭಾರತ ಚುನಾವಣಾ ಆಯೋಗ ಅಸ್ಸಾಂನ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೃಷ್ನೆಂದು ಪಾಲ್ ಅವರಿಗೆ ಸೇರಿದ ಕಾರ್ ನಲ್ಲಿ ಇವಿಎಂಗಳು ಪತ್ತೆಯಾಗಿವೆ. ಶಾಸಕರ ಪತ್ನಿಯ ಕಾರ್ ನಲ್ಲಿ ಇವಿಎಂ ಸಾಗಿಸಿದ ಘಟನೆ ನಡೆದಿದ್ದು, ತನಿಖೆಗೆ ಆದೇಶಿಸಲಾಗಿದೆ. ಏಪ್ರಿಲ್ 20 ಮರುಮತದಾನ ನಡೆಸಲಾಗುವುದು.