![](https://kannadadunia.com/wp-content/uploads/2023/04/AA1awb6f.jpg)
ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನ ಪ್ರಾಣ ಉಳಿಸಲು ಅಸ್ಸಾಂ ಪೊಲೀಸರೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು.
26 ವರ್ಷದ ಯುವಕನನ್ನು ರಕ್ಷಿಸುವ ಮೂಲಕ ಲಂಕೇಶ್ವರ ಕಲಿತ್ ಎಂದು ಗುರುತಿಸಲಾದ ಪೋಲೀಸ್ ತಮ್ಮ ಸಾಹಸದ ಕಾರ್ಯಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ನಗದು ಬಹುಮಾನ ಪಡೆದಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆಗಿದ್ದು ಅದರಲ್ಲಿ ವ್ಯಕ್ತಿ ಕುಳಿತಿದ್ದ ಸೇತುವೆಯ ಗೋಡೆಯನ್ನು ಲಂಕೇಶ್ವರ್ ಕವಿತ್ ನಿಧಾನವಾಗಿ ದಾಟಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಶೌರ್ಯದ ಪ್ರಯತ್ನದಲ್ಲಿ ಲಂಕೇಶ್ವರ ಕಲಿತಾ ಅವರು, ಬ್ರಹ್ಮಪುತ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ಯುವಕನನ್ನು ರಕ್ಷಿಸಿದ್ದಾರೆ. ಅವರ ಪ್ರಯತ್ನವನ್ನು ಅಸ್ಸಾಂ ಪೊಲೀಸ್ ಇಲಾಖೆ ಶ್ಲಾಘಿಸಿದ್ದು ಪುರಸ್ಕರಿಸಿದೆ ಎಂದು ರಾಜ್ಯ ಪೊಲೀಸ್ ಡಿಜಿಪಿ ಜಿಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.