ಅಸ್ಸಾಂನ ಕರೀಂಗಂಜ್ನಲ್ಲಿ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಅಮಾನುಷವಾಗಿ ಹೊಡೆದಿರುವ ಭಯಾನಕ ಘಟನೆ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿ ತನ್ನ ಶಿಕ್ಷಕರಿಂದ ಥಳಿತಕ್ಕೆ ಒಳಗಾಗಿದ್ದಾನೆ. ವಿದ್ಯಾರ್ಥಿಯ ತಲೆ ಮತ್ತು ಕಿವಿಗೆ ತೀವ್ರ ಗಾಯಗಳಾಗಿವೆ.
ಕರೀಂಗಂಜ್ನ ಪಥರ್ಕಂಡಿ ಸೆಂಟ್ರಲ್ ಪಬ್ಲಿಕ್ ಸ್ಕೂಲ್ನಲ್ಲಿ ಈ ಘಟನೆ ವರದಿಯಾಗಿದೆ. ಬಾಲಕನ ತಂದೆ ನಿಹಾರ್ ದೇಬನಾಥ್ ಅವರು ತಮ್ಮ ಮಗ ನಿರ್ಜರ್ ತಲೆಗೆ ಗಾಯಗಳ ಜೊತೆಗೆ ಕಿವಿಯಿಂದ ರಕ್ತಸ್ರಾವವಾಗಿದೆ ಎಂದು ಆರೋಪಿಸಿದ್ದಾರೆ.
ದೇಬನಾಥ್ ಪ್ರಕಾರ, ಅವರು ಗೋಪಾಲ್ ಕೃಷ್ಣ ಎಂದು ಗುರುತಿಸಲಾದ ಆರೋಪಿ ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಶಿಕ್ಷಕ ಮತ್ತು ಪುಂಡರು ದೇಬನಾಥ್ ಮಾಲೀಕತ್ವದ ಮಿಠಾಯಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಬಾಲಕನ ತಾಯಿಯನ್ನು ಒದ್ದು ನಿಂದಿಸಿದ್ದಾರೆ.