ಪುತ್ರನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹೆಮ್ಮೆ ವ್ಯಕ್ತಪಡಿಸಿದ ಅಸ್ಸಾಂ ಸಿಎಂ 02-11-2021 7:53AM IST / No Comments / Posted In: Latest News, India, Live News ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ನಂದಿಲ್ ಬಿಸ್ವಾ ಶರ್ಮಾ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಅವರ ಕುಟುಂಬವು ನಂದಿಲ್ ಅವರನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕಾಲೇಜು ಹಾಸ್ಟೆಲ್ ಸೇರ್ಪಡೆ ಮಾಡಿರುವ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅಸ್ಸಾಂ ಮುಖ್ಯಮಂತ್ರಿ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ, ಪುತ್ರ ನಂದಿಲ್ ಮತ್ತು ಪುತ್ರಿ ಸುಕನ್ಯಾ ಇದ್ದಾರೆ. ಈ ಹಾಸ್ಟೆಲ್ ಕೊಠಡಿಯಿಂದ ನಂದಿಲ್ ತನ್ನ ಜೀವನದ ಹೊಸ ಪ್ರಯಾಣ ಆರಂಭಿಸಿದ್ದಾರೆ ಎಂದು ಅಸ್ಸಾಂ ಸಿಎಂ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಹಿಮಂತ ಬಿಸ್ವಾ ಶರ್ಮಾ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ 2019 ರಲ್ಲಿ ಡೂನ್ ಸ್ಕೂಲ್‌ನ ನಾಯಕನಾಗಿದ್ದಾಗ ನಂದಿಲ್ ಮಾಡಿದ ಭಾಷಣದ ವಿಡಿಯೋವನ್ನು ಮುಖ್ಯಮಂತ್ರಿಗಳು ಹಂಚಿಕೊಂಡಿದ್ದಾರೆ. ನಂದಿಲ್ ಶರ್ಮಾ ಅವರು 2019ರಲ್ಲಿ ಪ್ರತಿಷ್ಠಿತ ಡೂನ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಕಾನೂನು ಕಾಲೇಜಿನ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ. Nandil has started a new journey of his life from this hostel room today. We just dropped him in the law School with lots of blessings. pic.twitter.com/6pXnYydoDG — Himanta Biswa Sarma (Modi Ka Parivar) (@himantabiswa) October 31, 2021 Nandil will join National Law School,Bangalore today. Sharing his speech as School Captain of the Doon School in the year 2019- Nandil Biswa Sarma, School Captain’s Speech (2019) https://t.co/7jL9SXiuMb via @YouTube — Himanta Biswa Sarma (Modi Ka Parivar) (@himantabiswa) October 30, 2021