alex Certify ‘ಸಂಬಂಧ’ ಗಟ್ಟಿಯಾಗಲು ನಿಮ್ಮ ಸಂಗಾತಿಯ ಬಳಿ ಕೇಳಿ ಈ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಂಬಂಧ’ ಗಟ್ಟಿಯಾಗಲು ನಿಮ್ಮ ಸಂಗಾತಿಯ ಬಳಿ ಕೇಳಿ ಈ ಪ್ರಶ್ನೆ

Relationships - Relationship Advice, Love & Romance, Married Life, Dating Tips | www.Boldsky.com

ಪ್ರತಿಯೊಬ್ಬರು ತಮ್ಮ ಹಾಗೂ ಸಂಗಾತಿಯ ಸಂಬಂಧ ಉತ್ತಮವಾಗಿರಬೇಕೆಂದು ಬಯಸುತ್ತಾರೆ. ಯಾಕೆಂದರೆ ಇದರಲ್ಲಿ ಇಡೀ ಕುಟುಂಬದ ಸಂತೋಷ ಅಡಗಿರುತ್ತದೆ. ಆದರೆ ಯಾವಾಗಲೂ ಜೊತೆಯಾಗಿ ಇರುವುದು, ಊಟ ಮಾಡುವುದು, ಇಷ್ಟವಾದ ಸ್ಥಳಕ್ಕೆ ಹೋಗುವುದು ಮಾತ್ರ ಸಂಬಂಧವನ್ನು ಬಲಗೊಳಿಸುವುದಿಲ್ಲ ಜೊತೆಗೆ ಸಂಬಂಧದಲ್ಲಿ ಕೆಲವು ಪ್ರಶ್ನೆಗಳನ್ನು ಸಂಗಾತಿಯ ಬಳಿ ಕೇಳುವುದರಿಂದ ಕೂಡ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆಯಂತೆ.

ನೀವು ನಿಮ್ಮ ಸಂಗಾತಿಯ ಬಳಿ ಯಾವುದೇ ವಿಚಾರ ಬಗ್ಗೆ ಮಾತನಾಡಿದರೂ ಕೂಡ ಕೊನೆಯಲ್ಲಿ ನಾನು ಹೇಳಿದ್ದು ನಿನಗೆ ಬೇಸರವಾಯಿತೇ? ಎಂದು ಕೇಳಬೇಕು. ಇದರಿಂದ ಅವರು ಕೊಡುವ ಉತ್ತರ ನಿಮಗೆ ಅವರ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದರಿಂದ ಅವರ ಮನಸ್ಸಿಗೂ ಖುಷಿಯಾಗುತ್ತದೆ.

ನಿಮ್ಮ ಸಂಗಾತಿಯ ಬಳಿ ನಮ್ಮ ಸಂಬಂಧದ ಬಗ್ಗೆ ಭಯವಿದೆಯೇ? ಎಂದು ಕೇಳಬೇಕು. ಯಾಕೆಂದರೆ ಕೆಲವೊಮ್ಮೆ ಅಸುರಕ್ಷಿತ ಭಾವನೆಯು ಸಂಗಾತಿಯ ಮನಸ್ಸನ್ನು ಹಾಳುಮಾಡಬಹುದು. ಹಾಗಾಗಿ ಇದರಿಂದ ಅವರ ಅನುಮಾನ ದೂರಮಾಡಬಹುದು.

ಹಾಗೇ ನಿಮ್ಮ ಸಂಗಾತಿಯ ಬಳಿ ನಮ್ಮಿಬ್ಬರ ನಡುವೆ ಏನು ವ್ಯತ್ಯಾಸವಿದೆ ಎಂದು ಕೇಳಿ. ಆಗ ಅವರು ನೀಡುವ ಉತ್ತರದಿಂದ ನೀವು ನಿಮ್ಮ ಬಗ್ಗೆ ಹಾಗೂ ಅವರ ಬಗ್ಗೆಯೂ ತಿಳಿದುಕೊಳ್ಳಬಹುದು.

ಅಲ್ಲದೇ ನಿಮ್ಮ ಸಂಗಾತಿಯ ಬಳಿ ಸಂಬಂಧದಲ್ಲಿ ಏನಾದರೂ ಬದಲಾವಣೆ ಮಾಡಬೇಕೆ? ಎಂದು ಕೇಳಿ. ಇದಕ್ಕೆ ಅವರು ನೀಡುವ ಉತ್ತರದಿಂದ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಇದರಿಂದ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ.

ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳಿ. ಇದರಿಂದ ಇಡೀ ಕುಟುಂಬ ಸಂತೋಷದಿಂದ ಕಾಲಕಳೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...