ಚಿಕ್ಕಬಳ್ಳಾಪುರ: ಬುದ್ಧಿ ಹೇಳಿದ್ದಕ್ಕೆ ಎಎಸ್ ಐ ಸ್ಕೂಟರ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.
ಗುಡಿಬಂಡೆ ಪೊಲೀಸ್ ಠಾಣೆಯ ಎಎಸ್ ಐ ನಂಜುಂಡ ಶರ್ಮ ಎಂಬುವವರಿಗೆ ಸೇರಿದ ಸ್ಕೂಟರ್ ಗೆ ಸಲೀಂ ಎಂಬಾತ ಬೆಂಕಿ ಹಚ್ಚಿದ್ದಾನೆ. ಅಣ್ಣ – ತಮ್ಮ ಇಬ್ಬರೂ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಈ ಸಂಬಂಧ ಎಎಸ್ ಐ ನಂಜುಂಡ ಶರ್ಮ ಆಸ್ಪತ್ರೆಗೆ ತೆರಳಿ ಇಬ್ಬರಿಗೂ ಬುದ್ಧಿ ಹೇಳಿದ್ದರು.
ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ಸಲೀಂ, ನಂಜುಂಡ ಶರ್ಮ ಅವರ ನಿವಾಸಕ್ಕೆ ತೆರಳಿ, ಅವರ ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.