
ಕೋಲಾರ: ಪಿಎಸ್ ಐ ಓರ್ವರ ಮೇಲೆ ನಿವೃತ್ತ ಎಎಸ್ಐ ದರ್ಪ ತೋರಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಭೀಮಗಾನಪಲ್ಲಿ ಕ್ರಾಸ್ ನಲ್ಲಿ ನಡೆದಿದೆ.
ವಾಹನವನ್ನು ತಡೆದು ತಪಾಸಣೆ ನಡೆಸುತ್ತಿದ್ದ ಗೌನಪಲ್ಲಿ ಪಿಎಸ್ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ದರ್ಪ ತೋರಿದ್ದಾರೆ.
ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನೆಗೆ ಹೋಗುವಂತೆ ಆವಾಜ್ ಹಾಕಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿದೆ.
ಹಳೇ ಪ್ರಕರಣವೊಂದರಲ್ಲಿ ತಮಗೆ ಅನುಕೂಲ ಮಾಡಿಲ್ಲ ಎಂಬ ಕಾರಣಕ್ಕಾಗಿ ನಿವೃತ್ತ ಎಎಸ್ಐ, ಪಿಎಸ್ಐ ಮೇಲೆ ಈ ರೀತಿ ದರ್ಪ ತೋರಿದ್ದಾರೆ ಎನ್ನಲಾಗಿದೆ.