
ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದೀಗ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಮಣಿಕಾಬಾತ್ರಾ ಟಿಟಿ ಅವರು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ರೌಂಡ್ ಆಫ್ 16 ನಾಕೌಟ್ ಪಂದ್ಯದಲ್ಲಿ ಭಾರತದ ಮಣಿಕಾಬಾತ್ರಾ ಟಿಟಿ (ಡಬ್ಲ್ಯುಆರ್ 36) ಥಾಯ್ಲೆಂಡ್ನ ಸುತಾಸಿನಿ ಸಾವೆಟ್ಟಾಬುಟ್ (ಡಬ್ಲ್ಯುಆರ್ 39) ಅವರನ್ನು 4-2 ಅಂತರದಿಂದ ಸೋಲಿಸಿ ಕ್ವಾಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.