ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಆರ್ಚರಿಯಲ್ಲಿ ಭಾರತದ ಮಹಿಳೆಯರ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಮತ್ತೊಂದು ಪದಕ ಖಚಿತ ಪಡಿಸಿದೆ.
ಏಷ್ಯನ್ ಗೇಮ್ಸ್ ನ ಕಾಂಪೌಂಡ್ ಆರ್ಚರಿಯಲ್ಲಿ ಭಾರತದ ವಿಜೆ ಸುರೇಖಾ,ಅದಿತಿ ಮತ್ತು ಪರಣೀತ್ ಅವರನ್ನೊಳಗೊಂಡ ಮಹಿಳಾ ತಂಡವು ಇಂಡೋನೇಷ್ಯಾವನ್ನು 233-219 ಅಂಕಗಳಿಂದ ಮಣಿಸಿ ಸುಲಭವಾಗಿ ಫೈನಲ್ ಪ್ರವೇಶಿಸಿತು.