ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ವಿಚಾರವಾಗಿ ಪರಸ್ಪರ ಬೈದಾಡಿ ಗಲಾಟೆ ಮಾಡಿಕೊಂಡಿದ್ದ ಆರೋಪದ ಮೇರೆಗೆ ಪುಟ್ಟೇನಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ತಲೆದಂಡವಾಗಿದೆ.
ಪುಟ್ಟೇನಹಳ್ಳಿ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಜುನಾಥ, ಹೆಡ್ ಕಾನ್ಸ್ಟೇಬಲ್ ಅಂಜನಾಮೂರ್ತಿ ವಿರುದ್ಧ ಶಿಸ್ತು ಕ್ರಮವಾಗಿದೆ. ಎರಡು ದಿನಗಳ ಹಿಂದೆ ಕುರ್ಚಿ ವಿಚಾರವಾಗಿ ಜಗಳವಾಡಿದ್ದು, ಗಂಭೀರವಾಗಿ ಈ ವಿಚಾರ ಪರಿಗಣಿಸಿದ ಇನ್ಸ್ಪೆಕ್ಟರ್ ರವಿಕುಮಾರ್ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ.